ಅಂತರಾಷ್ಟ್ರೀಯ

ಹೆಚ್ಚು ನಿದ್ದೆಯಿಂದ ದಂಪತಿ ನಡುವೆ ಲೈಂಗಿಕಾಸಕ್ತಿ

Pinterest LinkedIn Tumblr

SLEEP-1

ನ್ಯೂಯಾರ್ಕ್‌ :  ಚೆನ್ನಾಗಿ ನಿದ್ದೆ ಮಾಡುವುದರಿಂದ ದಿನದ ಉಲ್ಲಾಸ ಹೆಚ್ಚಾಗುವುದಲ್ಲದೇ, ದಂಪತಿ ನಡುವೆ ಲೈಂಗಿಕ ಆಸಕ್ತಿಯೂ ಹೆಚ್ಚುತ್ತದೆ ಎಂದು  ಸಂಶೋಧನೆಯೊಂದು ಹೇಳಿದೆ. ಮಿಷಿಗನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸಂಶೋಧಕ  ಡೇವಿಡ್‌ ಕಲಂಬಾಕ್‌  ಎಂಬವರು ನಡೆಸಿದ ಅಧ್ಯಯನ ವರದಿಯಿಂದ ಈ ಅಂಶ ಬಹಿರಂಗಗೊಂಡಿದೆ. ಉತ್ತಮ ನಿದ್ದೆ ಮಾಡಿದ ದಂಪತಿಗಳಲ್ಲಿ ಶೇ 14ರಷ್ಟು  ಲೈಂಗಿಕ ಆಸಕ್ತಿ ಹೆಚ್ಚಳವಾಗಲಿದೆ ಎಂದು ವರದಿ ಹೇಳಿದೆ.

ಮಲಗುವ ಕೋಣೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದರೆ ಅದು, ದಂಪತಿ ನಡುವಣ ಉಂಟಾದ ಸಮಸ್ಯೆಯಲ್ಲ. ಸರಿಯಾಗಿ ನಿದ್ದೆ ಮಾಡದಿರುವುದೇ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂದು ಸಂಶೋಧಕರು‌ ಅಭಿಪ್ರಾಯಪಟ್ಟಿದ್ದಾರೆ. ‘ಸೆಕ್ಸುಯಲ್‌ ಮೆಡಿಸಿನ್’    ಎಂಬ ನಿಯ­ತಕಾಲಿಕೆಯಲ್ಲಿ ಪ್ರಕಟಗೊಂಡಿರುವ ಈ ಅಧ್ಯಯನ ವರದಿಯಲ್ಲಿ 171 ಮಹಿಳೆ ಯ­ರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಹೆಚ್ಚು ನಿದ್ದೆ ಮಾಡಿದ ಮಾರನೇ ದಿನ ದಂಪತಿ ನಡುವೆ ಹೆಚ್ಚು ಲೈಂಗಿಕ ಆಸಕ್ತಿ ಉಂಟಾಗುತ್ತದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಬಹುತೇಕ  ಮಹಿಳೆಯರು ಒಪ್ಪಿಕೊಂಡಿದ್ದಾರೆ.

Write A Comment