ಬೆಂಗಳೂರು,ಮಾರ್ಚ್.19 : ಅಕ್ಷಯ ಪಾತ್ರೆ ಪ್ರತಿಷ್ಠಾನವು ಪಿಆರ್ಸಿಐ ನೀಡುವ `ಚಾಣಕ್ಯ ಪ್ರಶಸ್ತಿ’ಗೆ ಪಾತ್ರವಾಗಿದೆ. ಪಬ್ಲಿಕ್ ರಿಲೇಷನ್ ಕೌನ್ಸಿಲ್ ಆಫ್ ಇಂಡಿಯಾ ನವದೆಹಲಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ, 2015ನೇ ಸಾಲಿನ `ಉತ್ತಮ ಎನ್ಜಿಓ’ ವಿಭಾಗದಲ್ಲಿ ಅಕ್ಷಯ ಪಾತ್ರೆ ಪ್ರತಿಷ್ಠಾನ ಈ ಪ್ರಶಸ್ತಿ ಪಡೆದಿದೆ. ಜೊತೆಗೆ 2013-14 ನೇ ಸಾಲಿನ ವಾರ್ಷಿಕ ವರದಿಗೆ `ಪ್ಲಾಟಿನಂ ಪ್ರಶಸ್ತಿ’, `ದಿ ಪಾಸಿಬಿಲಿಟೀಸ್’ ವಿಡಿಯೋಗೆ ಚಿನ್ನದ ಪ್ರಶಸ್ತಿ ಹಾಗೂ `ಸಾಮಾಜಿಕ ಜಾಲತಾಣ ಅಭಿಯಾನ‘ ವಿಭಾಗದಲ್ಲಿ ಕಂಚಿನ ಪ್ರಶಸ್ತಿ ಗಳಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರತಿಷ್ಠಾನದ ಮುಖ್ಯಸ್ಥ ಶ್ರೀಧರ್ ವೆಂಕಟ್, ಪ್ರತಿ ವರ್ಷ ಲಕ್ಷಾಂತರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುತ್ತಿದ್ದು, ಸಮಾವೇಶದಲ್ಲಿ ದೊರೆತಿರುವ ಪ್ರಶಸ್ತಿ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ನೀಡಿದೆ. 2020 ರ ವೇಳೆಗೆ ದೇಶದ 50 ಲಕ್ಷ ಮಕ್ಕಳಿಗೆ ಊಟದ ಸೌಲಭ್ಯ ನೀಡುವ ಗುರಿಯಿದೆ ಎಂದು ತಿಳಿಸಿದರು.