(ಸಂಗ್ರಹ ಚಿತ್ರ)
ಉಡುಪಿ: ಕಾಪುವಿನಲ್ಲಿರು ಮೂರು ಪ್ರತ್ಯೇಕ ಮಾರಿಗುಡಿಗಳಲ್ಲಿ ಮಂಗಳವಾರ ಮತ್ತು ಬುಧವಾರ ನಡೆಯಲಿರುವ ಈ ಭಾರಿಯ ಸುಗ್ಗಿ ಮಾರಿಪೂಜಾ ಜಾತ್ರೆಯ ಸಂದರ್ಭ ಕೋಳಿ ಕುರಿ ಸಹಿತ ಪ್ರಾಣಿ ಬಲಿಯನ್ನು ನಿಷೇಧಿಸಿ ಜಿಲ್ಲಾಡಳಿತ ಅಧೀಕ್ರತ ಆದೇಶ ಹೊರಡಿಸಿದೆ.
ಹರಕೆ ರೂಪದಲ್ಲಿ ಪ್ರಾಣಿ ಬಲಿಯನ್ನು ನೀಡುವುದನ್ನು ತಡೆಯುವಂತೆ ಹೈಕೋರ್ಟ್ ನೀಡಿರುವ ಸೂಚನೆಯ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವತೆ ಪಶುಪಾಲನಾ ಇಲಾಖೆಯ ಹಾಗೂ ಉಡುಪಿ ತಹಸೀಲ್ದಾರ್ ಮೂಲಕ ಸೋಮವಾರ ಆದೇಶವನ್ನು ಹೊರಡಿಸಿದ್ದಾರೆ. ಈ ಬಗ್ಗೆ ಸೋಮವಾರದಂದು ಕಾಪುವಿನ ಮೂರು ಮಾರಿಗುಡಿಗಳ ಮುಖ್ಯಸ್ಥರುಗಳ ಸಭೆ ಕರೆದು ಪ್ರಾಣಿಬಲಿ ನಿಷೇಧಿಸಿ ಹೊರಡಿಸಲಾದ ಆಧೇಶವನ್ನು ಜಾರಿಗೊಳಸಲು ಸಹಕರಿಸುವಂತೆ ವಿನಂತಿಸಿದ್ದಾರೆ.
“ಕರ್ನಾಟಕ ಪ್ರಾಣಿಬಲಿ ಪ್ರತಿಬಂದಕ ಕಾಯ್ದೆ1959”ರ ಪ್ರಕಾರ ರಾಜ್ಯದಲ್ಲಿ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಪ್ರಾಣಿ ಬಲಿ ನಡೆಸುವುದು ನಿಷಿದ್ದವಾಗಿದ್ದು ತಪ್ಪಿತಸ್ಥರಿಗೆ ದಂಡ ಸಹಿತ 6 ತಿಂಗಳ ಜೈಲುವಾಸ ವಿಧಿಸುವ ಅವಕಾಶವಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾರಿಗುಡಿಗಳ ಆಡಳಿತ ಮಂಡಳಿಗೆ ಮನದಟ್ಟು ಮಾಡಿ ಈ ಬಗ್ಗೆ ಬ್ಯಾನರ್ ನೋಟೀಸು ಇತ್ಯಾದಿ ಲಗತ್ತಿಸಿ ಸಾರ್ವಜನಿಕರು ಪ್ರಾಣಿಬಲಿ ನೀಡದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಯಿತು
ಕೋಳಿ ಬಲಿ ತಪ್ಪಾ?: ಕಾಪು ಠಾಣೆಯಲ್ಲಿ ಸಭೆ ನಡೆಯುತ್ತಿದ್ದಾಗ ಠಾಣೆ ಸುತ್ತ ನೆರೆದಿದ್ದ ನೂರರು ಜನರು ಈ ಆಧೇಶದ ವಿರುದ್ದ ಅಸಾಮಾಧಾನ ವ್ಯಕ್ತ ಪಡಿಸಿದರು. ಕೋಳಿ ಬಲಿ ತಪ್ಪೆಂದಾದರೆ ಮಾರಾಟ ಮತ್ತು ಆಹಾರವಾಗಿಯೂ ಕೋಳಿ ಸಾಯಿಸೋದು ತಪ್ಪಲವೇ, ಇದನ್ನು ನಿಲ್ಲಿಸುತ್ತರಾ? ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂತು.