ಸದಾ ಬೆತ್ತಲೆಯಾಗುವ ಮಾತಿನಿಂದಲೇ ಸುದ್ದಿಯಾಗುತ್ತಿರುವ ಬಾಲಿವುಡ್ ಬೆಡಗಿ ಪೂನಂ ಪಾಂಡೆ ಈ ಬಾರಿ ತನ್ನ ಪ್ರತಿಜ್ಞೆಯನ್ನು ಈಡೇರಿಸುವ ಭರವಸೆ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಹೌದು. ಭಾರತ ಸೆಮಿ ಫೈನಲ್ ಪ್ರವೇಶಿಸುತ್ತಿದ್ದಂತೆ ಮತ್ತೆ ಪೂನಂ ಗೆ ತಾನು ಹಿಂದೆ ಕೊಟ್ಟಿದ್ದ ಮಾತು ನೆನಪಾಗಿದ್ದು ಈ ಬಾರಿ ಭಾರತ ವಿಶ್ವಕಪ್ ಗೆದ್ದರೆ ಯಾವುದೇ ಕಾರಣಕ್ಕೂ ನನ್ನ ಮಾತಿನಿದ ಹಿಂದೆ ಸರಿಯುವುದಿಲ್ಲ. ನನ್ನ ಮಾತಿಗೆ ಬದ್ದನಾಗಿದ್ದು ಬೆತ್ತಲೆಯಾಗಿಯೇ ತೀರುತ್ತೇನೆ ಎಂದು ಟ್ವಿಟ್ ಮಾಡುವ ಮೂಲಕ ಮತ್ತೆ ಪಡ್ಡೆ ಹುಡುಗರ ಮೈ ಬಿಸಿಯಾಗುವಂತೆ ಮಾಡಿದ್ದಾಳೆ.
ಈ ಹಿಂದಿನ ವಿಶ್ವಕಪ್ ನಲ್ಲಿ ಭಾರತ ಗೆದ್ದರೆ ಕ್ರೀಡಾಂಗಣದಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎನ್ನುವ ಮೂಲಕ ಪೂನಂ ಸುದ್ದಿಯಾಗಿದ್ದರು. ಆದರೆ ಭಾರತ ವಿಶ್ವಕಪ್ ಗೆದ್ದ ಮೇಲೆ ತನ್ನ ಮಾತಿನಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ಭಾರತ ಮತ್ತೆ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಮೂಡಿಸಿರುವುದರಿಂದ ಮತ್ತೊಮ್ಮೆ ತನ್ನ ಮಾತನ್ನು ಪುನರುಚ್ಚರಿಸಿದ ಈ ಬೆಡಗಿ ಈ ಬಾರಿ ಭಾರತ ಗೆದ್ದರೆ ಬೆತ್ತಲೆಯಾಗುವುದು ಖಚಿತ ಎಂದಿದ್ದಾಳೆ.
ಏನೇ ಇರಲಿ, ಪೂನಂ ನ ಈ ಮಾತಿನಿಂದ ಕ್ರಿಕೆಟ್ ನೋಡದವರೂ ಈ ಬಾರಿ ಕ್ರಿಕೆಟ್ ನೋಡುವ ನಿರ್ಧಾರ ಕೈಗೊಂಡರೆ ಆಶ್ಚರ್ಯವೇನಿಲ್ಲ. ಏನಂತೀರಿ..?