ಮಂಗಳೂರು : ಬ್ಯಾಂಕ್ ಕಾವಲುಗಾರನ ಬಂದೂಕಿನ ಟ್ರಿಗ್ಗರ್ ಆಕಸ್ಮಿಕವಾಗಿ ಒತ್ತಿ ಹೋದ ಪರಿಣಾಮ ತಮ್ಮದೇ ಬಂದೂಕಿನ ಗುಂಡು ತಗುಲಿ ಕಾವಲುಗಾರ ಸಾವಿಗೀಡಾದ ಘಟನೆ ಗುರುವಾರ ಮಧ್ಯಾಹ್ನ ನಗರದ ಪಿವಿ ಎಸ್ ವೃತ್ತದ ಬಳಿ ಇರುವ ಕೊಟಕ್ ಮಹೀಂದರ್ ಬ್ಯಾಂಕ್‌ನಲ್ಲಿ ನಡೆದಿದೆ.
ಕೊಟಕ್ ಮಹೀಂದರ್ ಬ್ಯಾಂಕ್‌ನ ಕಾವಲುಗಾರ ತಮ್ಮಯ್ಯ (55) ಅವರು ಇಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಬಾತ್‌ರೂಂಗೆ ತೆರಳಿದ್ದ ಸಂದರ್ಭ ಅಲ್ಲಿ ಕಾಲು ಜಾರಿ ಬಿದ್ದಿದ್ದು, ಆಗ ಅವರ ಕೈಯಲ್ಲಿದ್ದ ಬಂದೂಕಿನ ಟ್ರಿಗ್ಗರ್ ಒತ್ತಿಹೋದ ಪರಿಣಾಮ ಅದರಿಂದ ಸಿಡಿದ ಗುಂಡು ಅವರ ಕುತ್ತಿಗೆ ಸಮೀಪ ದೇಹದೊಳಗೆ ಹೊಕ್ಕಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳದಲ್ಲಿ ಮೊದಲಿಗೆ ಸ್ವಲ್ಪ ಗೊಂದಲದ ವಾತವರಣ ಉಂಟಾಯಿತು, ಸ್ಥಳಕ್ಕೆ ಪೊಲೀಸರು ಆಗಮಿಸಿ, ತನಿಖೆ ಮುಂದುವರಿಸಿದ್ದಾರೆ.