ಉಳ್ಳಾಲ,ಮಾರ್ಚ್.28 : ಉಳ್ಳಾಲ ಇಸ್ಲಾಂ ಧರ್ಮ ಅಕ್ರಮ, ಅನ್ಯಾಯಗಳಿಗೆ ಪ್ರೋತ್ಸಾಹ ನೀಡಿಲ್ಲ. ಇತರ ಧರ್ಮದವರ ಧಾರ್ಮಿಕ ಕೇಂದ್ರಗಳಿಗೆ ಪೆಟ್ರೋಲ್ ಬಾಂಬ್ ಎಸೆಯಲು, ಕಲ್ಲೆಸೆಯಲು ಪ್ರವಾದಿಯವರು ಕಲ್ಪಿಸಿಲ್ಲ. ಅಂತಹ ಕೃತ್ಯ ಎಸಗುವವರು ಇಸ್ಲಾಂ ಧರ್ಮದ ಬಗ್ಗೆ ಅರ್ಥಮಾಡಿಕೊಳ್ಳದವರು. ಬಲಾತ್ಕಾರವಾಗಿ ಮತಾಂತರ ಮಾಡಲು ಅವಕಾಶ ಇಸ್ಲಾಂನಲ್ಲಿ ಇಲ್ಲ ಎಂದು ಸೆಯ್ಯಿದ್ ಸಿ.ಟಿ.ಎಂ. ಸಲೀಂ ಅಸ್ಸಖಾಫ್ ತಂಙಳ್ ಕಕ್ಕಿಂಜೆ ಹೇಳಿದರು. ಇವರು ಇರ್‌ಶಾದುಸ್ಸಿಬಿಯಾನ್ ಹಳೆ ವಿದ್ಯಾರ್ಥಿ ಸಂಘ ಬೆಳ್ಮ ದೋಟ ಇದರ 18 ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ನೂರುಲ್ ಉಲಮಾ ಅನುಸ್ಮರಣೆ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ನೀಡಿ ಮಾತನಾಡಿದರು.
ಕೋಮುಸಂಘರ್ಷಕ್ಕೆ ಆಸ್ಪದ ಕೊಡುವ ಕೆಲಸ ನಮಗೆ ಬೇಡ. ಇಸ್ಲಾಂ ಏನನ್ನು ಕಲಿಸಿದೆಯೋ ಅದನ್ನು ನಾವು ಜೀವನದಲ್ಲಿ ಅನುಸರಿಸಿಕೊಂಡು ಬರಬೇಕು. ನಮ್ಮನ್ನಗಲಿದ ತಾಜುಲ್ ಉಲಮಾ ಅವರು ಇಸ್ಲಾಂ ಧರ್ಮಕ್ಕೆ ಪ್ರಚಾರ ನೀಡಿದವರು.ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಪಡೆಯಲು ಪೂರ್ಣ ಸಹಕಾರ ನೀಡಿದ್ದರು. ಅವರ ದುವಾಆಶೀರ್ವಚನದಿಂದ ಉಳ್ಳಾಲಕ್ಕೆ ಈಗ ಹೆಸರು ಬಂದಿದೆ. ವಿವಿದ ಕಾಲೇಜುಗಳು ತಲೆಯೆತ್ತಿ ನಿಂತಿವೆ. ಮಹಳಷ್ಟು ಕಡೆ ಮಸೀದಿ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೇರವೇರಿಸಿದವರು. ಅದೇ ರೀತಿ ನೂರುಲ್ ಉಲಮಾ ಕೂಡಾ ಮಹಾನ್ ಚಿಂತಕರಾಗಿದ್ದರು. ಅವರು ಅನುಸರಿಸಿದ ಹಾದಿಯಲ್ಲಿ ನಾವು ಸಾಗೋಣ ಎಂದು ಕರೆ ನೀಡಿದರು.
ಬೆಳ್ಮದೋಟ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಸಅದಿಅಲ್ ಅಪ್ಳಲಿಅವರು ನೂರುಲ್ ಉಲಮಾ ಎಂಎ ಉಸ್ತಾದ್‌ರವರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಮಹತ್ವವನ್ನು ಕೂಲಂಕಷವಾಗಿ ಅರ್ಥಮಾಡಿಕೊಂಡ ಮಹಾನ್ ಪಂಡಿತರಾಗಿದ್ದರು. ಅವರು ಶಿಕ್ಷಣದ ಮಹತ್ವವನ್ನು ಅರಿತುಕೊಂಡೇ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದ್ದರು. ಈ ಶಿಕ್ಷಣ ಸಂಸ್ಥೆಯಲ್ಲಿ ಬಹಳಷ್ಟು ಮಂದಿ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಬೆಳೆದು ನಿಂತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಂಝ ಸಖಾಫಿ ಅಝ್‌ಹರಿ, ಅಬ್ದುಲ್ ಅಝೀಝ್ ಸಖಾಪಿ, ಜಮಾಲುದ್ದೀನ್ ಮುಸ್ಲಿಯಾರ್ ಸಜಿಪ, ಮುತ್ತಲಿಬ್ ಸಖಾಫಿ, ಖಾಸಿಂ ಮುಸ್ಲಿಯಾರ್, ಕಲ್ಲುಡ್ಡೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಸುಲೈಮಾನ್ ಬಾಕಿಮಾರ್ ಮೊದಲಾದವರು ಉಪಸ್ಥಿತರಿದ್ದರು.