ಮುಂಬಯಿ : ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್ ಇದರ ಮಾಜಿ ಅದ್ಯಕ್ಷ ಕೊಲಕಾಡಿ ಜನಾರ್ದನ ಟಿ. ಆಚಾರ್ಯ ನಿಧನಕ್ಕೆ ಮಾ 26 ರಂದು ಅಂಧೇರಿ ಅದಮಾರು ಮಠದಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.
ಕರ್ನಾಟಕ ವಿಶ್ವಕರ್ಮ ಅಸೋಶಿಯೇಶನ್ ನ ಅದ್ಯಕ್ಷ ನಿಟ್ಟೆ ದಾಮೋದರ ಆಚಾರ್ಯ ಮಾತನಾಡುತ್ತಾ ಸಮಾಜ ಸದಾ ನೆನಪಿಸಿಕೊಳ್ಳುವ ಪ್ರಾಮಾಣಿಕ ವ್ಯಕ್ತಿ ಜೆ. ಟಿ. ಆಚಾರ್ಯ ಆಗಿದ್ದು ಅವರ ಸೇವೆಯನ್ನು ನೆನಪಿಸಿಕೊಂಡರು. ದೇವರ ಸೇವೆ, ಗುರುಗಳ ಸೇವೆ ಹಾಗೂ ಸಮಾಜ ಸೇವೆಯನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಾ ಬಂದವರು ಜೆ. ಟಿ. ಆಚಾರ್ಯ ರು ಎಂದು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಕೆ. ಕೇಶವ ಆಚಾರ್ಯ ಅವರು ಶ್ರದಾಂಜಲಿ ಸಲ್ಲಿಸುತ್ತಾ ನುಡಿದರು.
ಮಂಗಳೂರು ಕೆನರಾ ಜ್ಯೂವೆಲ್ಲರ್ಸ್ ನ ಧನಂಜಯ ಪಾಲ್ಕೆ, ಕೆ. ಮೋಹನ್, ಜ್ಯೋತಿಷಿ ವಾದಿರಾಜ ಆಚಾರ್ಯ, ಪಾದೂರು ಜನಾರ್ಧನ ಆಚಾರ್ಯ, ಗಣೇಶ್ ಕುಮಾರ್, ದಾಮೋದರ ಆಚಾರ್ಯ ಗಂಜಿಮಠ, ರವೀಶ್ ಆಚಾರ್ಯ, ಆಶೋಕ್ ಪುರೋಹಿತ್, ಜಿ. ಟಿ. ಆಚಾರ್ಯ ಮೊದಲಾದವರು ಮಾತನಾಡಿದರು.
ದಿವಂಗತರ ಪತ್ನಿ, ಪುತ್ರಿ, ಬಂಧುಗಳು, ಸಮಾಜದ ಗಣ್ಯರು ಹಾಗೂ ಹಿತೈಷಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.