ಮಂಗಳೂರು,ಮಾರ್ಚ್.30 : ವಿಶ್ವ ಹಿಂದೂ ಪರಿಷತ್, ಬಜರಂಗದಳ,ಮಾತೃಮಂಡಳಿ, ದುರ್ಗಾ ವಾಹಿನಿ ಮತ್ತು ಶ್ರೀರಾಮೋತ್ಸವ ಸಮಿತಿಯ ವತಿಯಿಂದ ಜರಗಿದ ಶ್ರೀ ರಾಮೋತ್ಸವದ ಅಂಗವಾಗಿ ಕೇಂದ್ರ ಮೈದಾನದಲ್ಲಿ ಮೂರು ದಿನಗಳ ಕಾಲ ವಿವಿಧ ರೀತಿಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕೊನೆಯ ದಿನವಾದ ರವಿವಾರ ಸಂಜೆ ರಾವಣ ದಹನ ಹಾಗೂ ಸುಡುಮದ್ದು ಪ್ರದರ್ಶನ ಮೂಲಕ ಸಂಪನ್ನಗೊಂಡಿತು.
ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಪ್ರಮುಖರಾದ ವಿಜಯನಾಥ ವಿಠಲ ಶೆಟ್ಟಿ, ಹರಿಶ್ಚಂದ್ರ, ಕೇಶವ ಹೆಗ್ಡೆ, ನಳಿನ್ ಕುಮಾರ್ ಕಟೀಲು, ಡಾ| ಅಣ್ಣಯ್ಯ ಕುಲಾಲ್, ಹೇಮಂತ್ ಕುಮಾರ್, ವಿನಯ ನಾಯಕ್, ಸುದರ್ಶನ ಮೂಡಬಿದಿರೆ, ಎಂ.ಬಿ. ಪುರಾಣಿಕ್, ಗೋಪಾಲ್ ಕುತ್ತಾರ್, ಪ್ರವೀಣ್ ಕುತ್ತಾರ್, ಶಿವಾನಂದ ಮೆಂಡನ್, ಸುದರ್ಶನ್, ಜಗದೀಶ ಶೇಣವ, ಪುಷ್ಪರಾಜ್ ಜೈನ್, ಜಿತೇಂದ್ರ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.