ಅಂತರಾಷ್ಟ್ರೀಯ

ಭ್ರೂಣ ಹತ್ಯೆ ಪ್ರಕರಣ: ಭಾರತೀಯ ಅಮೇರಿಕನ್ ಮಹಿಳೆಗೆ ಜೈಲು ಶಿಕ್ಷೆ.

Pinterest LinkedIn Tumblr

abotipn_in_preson

ಗ್ರಾಂಗರ್, ಮಾರ್ಚ್.31 : ಕಳೆದ ತಿಂಗಳು ಹೆಣ್ಣು ಭ್ರೂಣಹತ್ಯೆಗೆ ಮಾಡಿ ತಪ್ಪಿತಸ್ಥಳೆಂದು ಸಾಬೀತಾಗಿದ್ದ ಭಾರತೀಯ ಅಮೇರಿಕನ್ ಮಹಿಳೆಗೆ 20  ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಇಂಡಿಯಾನಾದ ಸೌತ್ ಬೆಂಡ್ ನ್ಯಾಯಾಧೀಶ ಸೋಮವಾರ ಈ ಶಿಕ್ಷೆಯನ್ನು ಘೋಷಿಸಿದ್ದಾರೆ ಎಂದು ಸಾರ್ವಜನಿಕ ಅಂತರಾಷ್ಟ್ರೀಯ ರೇಡಿಯೋ ಅಂತರ್ಜಾಲ ವರದಿ ಮಾಡಿದೆ.

ದಕ್ಷಿಣ ಬೆಂಡ್ ನ ಇಂಡಿಯಾನಾದ ಗ್ರಾಂಗರ್ ನಲ್ಲಿ ನೆಲೆಸಿರುವ ಭಾರತೀಯ ವಲಸಿಗ ಮಹಿಳೆ 33 ವರ್ಷದ ಪೂರ್ವಿ ಪಟೇಲ್ ಶಿಕ್ಷೆಗೆ ಗುರಿಯಾದವರು. ಹಾಂಕಾಂಗ್ ನಿಂದ ಔಷಧಿ ತರಿಸಿ ಈ ಭ್ರೂಣ ಹತ್ಯೆಗೆ ಕಾರಣವಾಗಿದ್ದನ್ನು ಪೊಲೀಸರು ಶೋಧಿಸಿ ಪಟೇಲ್ ಅವರನ್ನು ಬಂಧಿಸಿದ್ದರು. ಇಂಡಿಯಾನಾದಲ್ಲಿ ಮಹಿಳಾ ಭ್ರೂಣಹತ್ಯೆಗೆ ಶಿಕ್ಷೆಗೆ ಗುರಿಯಾಗಿರುವ ಮೊದಲ ಮಹಿಳೆಯಾಗಿದ್ದಾರೆ ಪಟೇಲ್.

Write A Comment