ಬೆಂಗಳೂರು,ಏ.7- ಉದ್ಯಾನನಗರಿ ಬೆಂಗಳೂರು ಧಗಧಗಿಸುತ್ತಿದೆ. ಸುಮಾರು 370 ಸೆಲ್ಸಿಯಸ್ ತಾಪಮಾನ ಬೆಂಗಳೂರಿಗರನ್ನು ಕಂಗೆಡಿಸುತ್ತಿದೆ. ಮಧ್ಯಾಹ್ನ ಬಿಸಿಲಿನ ಧಗೆಗೆ ಜನ ಛತ್ರಿ ಹಿಡಿದು ಓಡಾಡುವಂತಾಗಿದೆ. ಸೂರ್ಯನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರಾಸರಿಗಿಂತ 30 ಸೆಲ್ಸಿಯಸ್ ಹೆಚ್ಚಾಗಿದ್ದು, ಬಿಸಿಲಿಗೆ ನೆತ್ತಿ ಸುಡಲಾರಂಭಿಸಿದೆ. ಒಣ ಹವೆ ಮುಂದುವರೆದಿರುವುದರಿಂದ ಉಷ್ಣಾಂಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಜನ ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದು,
ಫ್ಯಾನ್, ಏಸಿ, ಕೂಲರ್‌ಗಳ ಮೊರೆ ಹೋಗಿದ್ದಾರೆ. ಕೂಲಿ ಕಾರ್ಮಿಕರ ಪಾಡು ಹೇಳತೀರದಾಗಿದೆ. ಉದ್ಯಾನನಗರಿ ಎಂಬ ಹೆಗ್ಗಳಿಕೆ ಇದ್ದರೂ ರಸ್ತೆ ಡಾಂಬರೀಕರಣ, ಕಾಂಕ್ರೀಟಿಕರಣ, ಅಗಲೀಕರಣ ನೆಪದಲ್ಲಿ ಮಾರಣ ಹೋಮ ನಡೆದಿರುವುದರಿಂದ, ಕೆರೆಗಳು ಒತ್ತುವರಿಯಾಗಿರುವುದರಿಂದ ತಂಪಾಗಿದ್ದ ಬೆಂಗಳೂರು ಕೆಂಡದಂತಾಗಿ ಮಾರ್ಪಟ್ಟಿದೆ.
ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಸ್ಥೆಯ ವರದಿ ಪ್ರಕಾರ ರಾಜ್ಯದ ಶೇ.76.3ರಷ್ಟು ಭೌಗೋಳಿಕ ಪ್ರದೇಶದಲ್ಲಿ 36ರಿಂದ 370 ಸೆಲ್ಸಿಯಸ್ ಉಷ್ಣಾಂಶ ದಾಖಲಾಗುತ್ತಿದೆ. ದಕ್ಷಿಣದಿಂದ ಉತ್ತರಕ್ಕೆ ಬೀಸುತ್ತಿರುವ ವಾಯುಭಾರ ಕುಸಿತದ ಅಲೆಗಳಿಂದಾಗಿ ಒಳನಾಡು ಜಿಲ್ಲೆಗಳಾದ ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ, ತುಮಕೂರು ಮುಂತಾದ ಜಿಲ್ಲೆಗಳಲ್ಲಿ ಒಂದೆರಡು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದರೆ ಇಂದು ಮಳೆ ಕ್ಷೀಣವಾಗಿ ಈ ಭಾಗದಲ್ಲೂ ಕೂಡ ಬಿಸಿಲಿನ ತಾಪ ತೀವ್ರಗೊಂಡಿದೆ. ರಾಜ್ಯದ ಎಲ್ಲೆಡೆ ಉಷ್ಣಾಂಶ ಏರಿಕೆಯಾಗಿದೆ. ಮುಂದಿನ ಒಂದು ವಾರ ಕಾಲ ಬಿಸಿಲಿನ ಧಗೆ ಮುಂದುವರೆಯಲಿದೆ. ನಂತರ ಹಲವೆಡೆ ಮಳೆ ಬೀಳುವ ನಿರೀಕ್ಷೆ ಇದೆ.