ಕನ್ನಡ ವಾರ್ತೆಗಳು

ಇನ್ಸುರೆನ್ಸ್ ಕಂಪೆನಿಯ ಕಿಟಕಿ ಮುರಿದು ಹಣ ಕಳವು ಮಾಡಿದ ಕಳ್ಳರು..!

Pinterest LinkedIn Tumblr

ಕುಂದಾಪುರ: ಇಲ್ಲಿನ ಹೆದ್ದಾರಿ ಸಮೀಪದ ಕಾಂಪ್ಲೆಕ್ಸ್‌ವೊಂದರಲ್ಲಿದ್ದ ಯುನೈಟೆಡ್ ಇಂಡಿಯಾ ಇನ್ಸುರೆನ್ಸ್ ಕಂಪೆನಿ ಲಿಮಿಟೆಡ್ ಕಂಪೆನಿಯ ಹಿಂದಿನ ಕಿಟಕಿಯ ಎರಡು ಕಬ್ಬಿಣದ ರಾಡನ್ನು ತುಂಡು ಮಾಡಿ ಒಳ ಪ್ರವೇಶಿಸಿದ ಕಳ್ಳರು ಕನ್ನ ಹಾಕಿದ ಘಟನೆ ನಡೆದಿದೆ.

Kundapura_Theaft_Case Kundapura_Theaft_Case (1) Kundapura_Theaft_Case (2) Kundapura_Theaft_Case (3) Kundapura_Theaft_Case (4) Kundapura_Theaft_Case (5)

ಘಟನೆ ವಿವರ: ಕಛೇರಿಯ ಕ್ಯಾಶ್ ಬಾಕ್ಸನ್ನು ಜಖಂಗೊಳಿಸಿ, ಅದರಲ್ಲಿದ್ದ ರೂಪಾಯಿ 34,857 ಹಾಗೂ ಎಲ್.ಎನ್ ಮುರಳೀಧರರವರ ಛೇಂಬರ್‌ನ ಡ್ರಾವರ್‌ನಲ್ಲಿದ್ದ ರೂಪಾಯಿ 3500, ಒಟ್ಟು ಮೌಲ್ಯ ರೂಪಾಯಿ 38,357 ಹಣವನ್ನು ಕಳವು ಮಾಡಿದ್ದಾರೆ. ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಕಟ್ಟಡದ ಹೊರ ಭಾಗದಲ್ಲಿ ಯಾವುದೇ ಸಿಸಿ ಕ್ಯಾಮೆರಾ ಇರಲಿಲ್ಲ.

ಘಟನೆ ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್, ಎಸ್ಸೈ ನಾಸೀರ್ ಹುಸೇನ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.

Write A Comment