“ನೃತ್ಯವು ಉದ್ದೇಶ ಹಾಗೂ ಉತ್ಸಾಹದ ಸಂಗಮ”
“ಶ್ರೇಷ್ಟ ನೃತ್ಯಗಾರರ ಶ್ರೇಷ್ಟತೆ ಅವರ ತಂತ್ರಗಾರಿಕೆಯಿಂದಲ್ಲ, ಬದಲಾಗಿ ಅವರ ಸದುದ್ದೇಶ ಹಾಗೂ ಉತ್ಸಾಹಕ್ಕಾಗಿ ಅವರು ಶ್ರೇಷ್ಟರಾಗಿರುತ್ತಾರೆ”
ಇದೇ ರೀತಿಯ ಸದುದ್ದೇಶ ಹಾಗೂ ಉತ್ಸಾಹದ ಜೊತೆ ಜೊತೆಗೆ ಸಮಾಜ ಸೇವೆಯ ಧ್ಯೇಯೋದ್ದೇಶವನ್ನಿಟ್ಟುಕೊಂಡು, ’ಧೂಮ್ ಡ್ಯಾನ್ಸ್ ಗ್ರೂಪ್ ಕುವೈತ್’ ಸಹೃದಯ ಪ್ರೇಕ್ಷಕರು ಹಾಗೂ ಧಾನಿಗಳನ್ನು ತನ್ನ 5ನೆಯ ವರ್ಷದ ಕಾರ್ಯಕ್ರಮವಾದ ’ಧೂಮ್ ಮಚಾಲೆ – 2015’ ನೃತ್ಯೋತ್ಸವಕ್ಕೆ ಆದರದಿಂದ ಸ್ವಾಗತಿಸುತ್ತಿದ್ದೇವೆ.
ಶುಕ್ರವಾರ, ಎಪ್ರಿಲ್ 17, 2015 ರಂದು ಸಂಜೆ 4:00 ಘಂಟೆಯಿಂದ ಸಾಲ್ಮಿಯಾ ಇಂಡಿಯಾ ಮೋಡೆಲ್ ಸ್ಕೂಲ್ (SIMS) ಸಾಲ್ಮಿಯಾ, ಕುವೈತ್ ಇಲ್ಲಿ ಧೂಮ್ ಡ್ಯಾನ್ಸ್ ಗ್ರೂಪ್ ಕುವೈತ್ ನವರಿಂದ ಮನರಂಜಿಸುವ ಹಿಪ್ಪ್- ಹೊಪ್ಪ್, ಕಂಟೆಮ್ಪ್ರೊರಿ (ಸಮಕಾಲೀನ), ರೋಬೊಟಿಕ್, ಭಾಲಿವುಡ್, ಎಕ್ರೊಬ್ಯಾಟಿಕ್ಸ್ ಶೈಲಿಯ ನೃತ್ಯಗಳ ಜೊತೆಗೆ, ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ, ಝೀ ಟಿವಿಯ ’ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಖ್ಯಾತಿಯ ಧನುಷ್ ರವರು ತಮ್ಮ ನೃತ್ಯಕೌಶಲ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಅತ್ಯುತ್ತಮವಾದ ನೃತ್ಯ, ನಗೆಗಡಲಿನಲ್ಲಿ ಮುಳುಗಿಸುವ ಹಾಸ್ಯ ಪ್ರಹಸನಗಳು, ಹೆಸರಾಂತ ಗಾಯಕರಿಂದ ಇಂಪಾದ ಹಾಡುಗಳು ತಮ್ಮ ಮನತಣಿಸಲಿವೆ.
ಅತ್ಯಂತ ಸಂತೋಷದಿಂದ ಈ ವಿಷಯವನ್ನು ತಿಳಿಸುತ್ತಿದ್ದೇವೆ. ಎನೆಂದರೆ, ನಮ್ಮ ಸಮಾಜ ಸೇವೆಯ ಅಂಗವಾಗಿ, ಈ ಕಾರ್ಯಕ್ರಮದಿಂದ ಬರುವ ಹಣವನ್ನು ಮಂಗಳೂರಿನ ಲಾಭದಾಯಕವಲ್ಲದ, ಸಮಾಜ ಸೇವಾ ಸಂಸ್ಥೆ, ಶ್ರೀ ಮಾತಾ ಲಕ್ಷಣಿ ವೃದ್ಧಾಶ್ರಮ (ಓಲ್ಡ್ ಎಜ್ ಹೋಮ್)ಕ್ಕಾಗಿ ಧಾನವಾಗಿ ನೀಡುತ್ತೇವೆ.