ರಾಷ್ಟ್ರೀಯ

ಕಾಲೇಜಿನ 3 ನೇ ಅಂತಸ್ತಿನಿಂದ ಹಾರಿದರೂ ಬದುಕುಳಿದ ವಿದ್ಯಾರ್ಥಿನಿ

Pinterest LinkedIn Tumblr

4653suicide-by-jumping-off

ನವದೆಹಲಿ: ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೂರನೇ ಅಂತಸ್ತಿನಿಂದ ಹಾರಿದ್ದು, ಈ ವೇಳೆ ಕಾಲಿನ ಮೂಳೆ ಮುರಿತದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ನವದೆಹಲಿಯ ಎಸ್ ಜಿ ಟಿ ಬಿ ಖಾಲ್ಸಾ ಕಾಲೇಜಿನಲ್ಲಿ ದ್ವಿತೀಯ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಹರಿಯಾಣದ ಫರೀದಾಬಾದ್ ಜಿಲ್ಲೆಯ ಈ ವಿದ್ಯಾರ್ಥಿನಿ ಶೈಕ್ಷಣಿಕವಾಗಿ ಇತರೆ ವಿದ್ಯಾರ್ಥಿಗಳಿಗಿಂತ ಹಿಂದುಳಿದಿದ್ದ ಕಾರಣ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಡೆತ್ ನೋಟ್ ಬರೆದಿಟ್ಟಿದ್ದಾಳೆ.

ಬಳಿಕ ಕಂಪ್ಯೂಟರ್ ವಿಭಾಗದ ಕಟ್ಟಡದ ಮೂರನೇ ಅಂತಸ್ತಿಗೆ ತೆರಳಿ ಇತರೆ ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆಯೇ ಅಲ್ಲಿಂದ ಕೆಳಗೆ ಧುಮುಕಿದ್ದಾಳೆ. ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿನಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು, ಕಾಲಿನ ಮೂಳೆ ಮುರಿತಕ್ಕೊಳಗಾಗಿರುವ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Write A Comment