ಕರಾವಳಿ

ಕುಂದಾಪುರದ ಲಾಡ್ಜಿನಲ್ಲಿ ವೃದ್ಧೆಯ ಅನುಮಾನಾಸ್ಪದ ಸಾವು; ಜೊತೆಗಿದ್ದ ಯುವಕ ಪರಾರಿ..?

Pinterest LinkedIn Tumblr

ಕುಂದಾಪುರ: ವೃದ್ಧೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ನಗರದ ಪ್ರತಿಷ್ಟಿತ ಲಾಡ್ಜೊಂದರಲ್ಲಿ ಬುಧವಾರ ಸಂಜೆ ಸುಮಾರಿಗೆ ನಡೆದಿದ್ದು, ಆಕೆಯೊಂದಿಗಿದ್ದ ಯುವಕನೂ ಪರಾರಿಯಾಗಿರುವ ಕಾರಣ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದೆ.

ಗಂಗೊಳ್ಳಿ ಮೂಲದವರಾದ ಲಲಿತಾ ದೇವಾಡಿಗ (58) ಎನ್ನುವವರೇ ಮೃತಪಟ್ಟ ವ್ರದ್ಧೆಯೆಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದ್ದು, ಇವರೊಂದಿಗಿದ್ದ ಮುಂಬೈ ಮೂಲದವನು ಎನ್ನಲಾದ ಅಝರ್ ಪಝಲ್ ಖಾನ್ (32) ವ್ಯಕ್ತಿ ಈಕೆಯ ಸಾವಿನ ಬಳಿಕ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

  Kundapura_Old Lady_Death (2) Kundapura_Old Lady_Death (3)  Kundapura_Old Lady_Death (5)  Kundapura_Old Lady_Death (7) Kundapura_Old Lady_Death (8) Kundapura_Old Lady_Death (9)

ಘಟನೆ ವಿವರ: ಅಝರ್ ಪಝಲ್ ಖಾನ್ (32) ಎನ್ನುವಾತ ಕಳೆದ 10 ದಿನಗಳ ಹಿಂದೆ ಕುಂದಾಪುರದ ಪ್ರತಿಷ್ಟಿತ ಲಾಡ್ಜೊಂದರಲ್ಲಿ ತನ್ನ ಮುಂಬೈ ಮೂಲದ ವಿಳಾಸ ನೀಡಿ ರೂಮು ಪಡೆದಿದ್ದ. ಈ ಕೊಠಡಿಗೆ ಬುಧವಾರ ಮಧ್ಯಾಹ್ನ 11.30 ಗಂಟೆ ಬಳಿಕ ಓರ್ವ ವೃದ್ಧೆ ಬಂದಿದ್ದು ಅವರನ್ನು ಲಾಡ್ಜಿನವರ ಬಳಿ ತನ್ನ ತಾಯಿಯೆಂದು ಪರಿಚಯಿಸಿಕೊಂಡಿದ್ದ. ಇದೇ ಕಾರಣಕ್ಕಾಗಿ ಅವರು ಆ ವೃದ್ಧೆಯ ಹೆಸರು ವಿಳಾಸವನ್ನು ಕೇಳುವ ಗೋಜಿಗೂ ಹೋಗಿರಲಿಲ್ಲ. ಆದರೇ ಸಂಜೆ ಸುಮಾರಿಗೆ ವೃದ್ಧೆ ಕುಸಿದು ಬಿದ್ದಿದ್ದು ರೂಂ ಬಾಯ್ (ಕೊಠಡಿ ಸಹಾಯಕ) ಈ ಕೊಠಡಿಗೆ ಹೋದಾಗ ವ್ರದ್ಧೆ ಪ್ರಜ್ನಾಹೀನ ಸ್ಥಿತಿಯಲ್ಲಿದ್ದು ಕೂಡಲೇ ಆಕೆಯನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆದಿತ್ತಾದರೂ ಕೂಡ ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು. ಈಕೆ ಸಾವಿನ ಬಳಿಕ ಕೊಠಡಿ ಬಾಡಿಗೆ ಪಡೆದಿದ್ದ ಅಝರ್ ಪಝಲ್ ಖಾನ್ ಎಂಬಾತನನ್ನು ಸಂಪರ್ಕಿಸುವ ಸಲುವಾಗಿ ಲಾಡ್ಜಿನ ಕೊಠಡಿಗೆ ಬಂದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದು ತಿಳಿದು ಬಂದಿದೆ.

ಕೂಡಲೇ ಕುಂದಾಪುರ ವ್ರತ್ತನಿರೀಕ್ಷಕ ದಿವಾಕರ ಪಿ.ಎಂ. ನೇತ್ರತ್ವದಲ್ಲಿ ತನಿಖೆ ಆರಂಭಗೊಂಡಿದ್ದು ಈ ವೇಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವೃದ್ಧೆ ಗಂಗೊಳ್ಳಿ ಮೂಲದ ಲಲಿತಾ ದೇವಾಡಿಗ ಎಂದು ತಿಳಿದಿದೆ. ಆದರೇ ಪಝಲ್ ಖಾನ್ ಬಗ್ಗೆ ಯಾವ ಮಾಹಿತಿಯೂ ಅಲಭ್ಯವಾಗಿದ್ದು ಪೊಲೀಸರು ಹಲವು ತಂಡಗಳೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.

ಮುಂಬೈ ಮೂಲದ ಖಾನ್ ಎಂಬಾತನಿಗೂ ಗಂಗೊಳ್ಳಿ ಮೂಲದ ಈ ವೃದ್ಧೆಗೂ ನಂಟು ಹೇಗೇ..? ಆಕೆ ಈತನ ಕೊಠಡಿಗೆ ಬಂದಿದ್ದಾದರೂ ಏಕೆ..? ಅಲ್ಲಿ ಆಕೆ ಮೃತಪಟ್ಟಿದ್ದು ಹೇಗೆ..? ಈಕೆ ಸಾವಿನ ಬಳಿಕ ಆತ ಪರಾರಿಯಾಗಿದ್ದಾದರೂ ಏಕೆ..? ಈಕೆಯ ಸಾವಿಗೆ ಕಾರಣವಾದರೂ ಏನು ಎಂಬುದು ಮಾತ್ರ ಇನಷ್ಟೇ ತಿಳಿದು ಬರಬೇಕಾಗಿದೆ.

ಕುಂದಾಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Write A Comment