ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬೈ,(ನೆರುಳ್), ಎ.18: ನಗರದ ಹಿರಿಯ ಜಾತೀಯ ಸಂಸ್ಥೆ 9 ದಶಕಗಳ ಕಾಲ ದೇಶಾದ್ಯಂತ ಗುರುತಿಸಿಕೊಂಡಿರುವ ದೇವಾಡಿಗ ಸಂಘ ಮುಂಬೈ ಇದರ 90ರ ಸಂಭ್ರಮದ ಆಚರಣೆಯ ಪ್ರಯುಕ್ತ ಎ.18 ಮತ್ತು 19ರಂದು ಎರಡು ದಿನಗಳ ಕಾಲ ನಡೆಯಲಿರುವ 90ರ ಸಂಭ್ರಮವನ್ನು ಶನಿವಾರ ಬೆಳಗ್ಗೆ ನೆರುಳ್ ಪಶ್ಚಿಮದ ಸೆಕ್ಟರ್ 12ರಲ್ಲಿರುವ ದೇವಾಡಿಗ ಭವನ (ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರ)ದಲ್ಲಿ ಸಂಘದ ಅಧ್ಯಕ್ಷ ವಾಸು ಎಸ್.ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಚಾಲನೆಗೊಂಡಿತು.
ಎರಡು ದಿನಗಳ ಕಾಲ ನಡೆಯಲಿರುವ ಸಂಭ್ರಮಾಚರಣೆಯನ್ನು ದೀಪ ಬೆಳಗಿಸುವ ಮೂಲಕ ಸಂಘದ ಮಾಜಿ ಅಧ್ಯಕ್ಷ ಭುಜಂಗಾಧರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಐದು ದಶಕಗಳ ಹಿಂದೆ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿರುವೆನು. ಸಂಘವು ಪ್ರಗತಿಪಥದಲ್ಲಿ ಮುಂದುವರಿಯುವುದನ್ನು ಕಂಡಾಗ ಅತೀವ ಸಂತಸವಾಗುತ್ತಿದೆ. 90ರ ಸಂಭ್ರಮವನ್ನು ಉದ್ಘಾಟಿಸುವ ಭಾಗ್ಯ ನನ್ನದಾಗಿರುವುದಕ್ಕೆ ಸಮಸ್ತ ದೇವಾಡಿಗ ಬಂಧುಗಳಿಗೆ ಆಭಾರಿಯಾಗಿದ್ದೇನೆ. ಈ ಸಂಭ್ರಮವು ಸಮಾಜದ ಸಾಂಘಿಕಶಕ್ತಿಗೆ ದ್ಯೋತಕವಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಅಧ್ಯಕ್ಷ ವಾಮನ ಮರೋಳಿ ಮಾತನಾಡಿ, ದೇವಾಡಿಗ ಸಂಘ ಮುಂಬೈ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಂದು ಹೊರನಾಡ, ಒಳನಾಡ ಹಾಗೂ ಗಲ್ಫ್‌ರಾಷ್ಟ್ರಗಳಲ್ಲಿ ದೇವಾಡಿಗ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿರುವುದು ಸಂಭ್ರಮಕ್ಕೆ ಇನ್ನಷ್ಟು ಮೆರೆಗು ತಂದಿದೆ ಎಂದರಲ್ಲದೆ, ಕರ್ನಾಟಕ ರಾಜ್ಯ ದೇವಾಡಿಗ ಸಂಘ ಮಂಗಳೂರು ಇದರ ಕಾರ್ಯವೈಖರಿಯ ಚಿತ್ರಣ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ದೇವಾಡಿಗ ಸಂಘ ಬೆಂಗಳೂರು ಇದರ ಅಧ್ಯಕ್ಷ ರಘು ಶೇರಿಗಾರ್ ಮಾತನಾಡಿ, ತನ್ನ ಅಭಿಪ್ರಾಯವನ್ನು ಮಂಡಿಸುತ್ತಾ, ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ಕಾರ್ಯಕ್ರಮ ನಡೆಸುವುದು ಕಷ್ಟಕರ ಕೆಲಸ, ಆದರೆ ದೇವಾಡಿಗ ಸಂಘ ಮುಂಬೈ ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಸ್ತ ದೇವಾಡಿಗ ಬಂಧುಗಳ ಸಹಕಾರದೊಂದಿಗೆ ಸುಲಭಸಾಧ್ಯವಾಗಿಸಿದ್ದಾರೆ. ಹಳೆ ಬೇರು…ಹೊಸ ಚಿಗುರು ಎಂಬಂತೆ ಯುವಜನಾಂಗ ಸಮಾಜದ ಕಾರ್ಯದಲ್ಲಿ ಮುಂದೆ ಬರಬೇಕು ಎಂದರು.
ಸಂಘದ ಅಧ್ಯಕ್ಷ ವಾಸು ಎಸ್.ದೇವಾಡಿಗ ಮಾತನಾಡಿ, ಸಂಘವು ಮುಂಬೈ ಮಹಾನಗರದಲ್ಲಿ ಹಿರಿಯ ಜಾತೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದ ಮಹತ್ತರ ಕಾರ್ಯ ಯೋಜನೆಗಳು ಪ್ರತಿಯೊಬ್ಬ ಸದಸ್ಯರ ಮನೆ ಬಾಗಿಲಿಗೆ ತಲುಪುವಂತೆ ಮಾಡುವಲ್ಲಿ ಸಂಘವು ಶ್ರಮಿಸುತ್ತಿದೆ. ಸಮಾಜ ಬಾಂಧವರ ಸಹಕಾರ , ಪ್ರೋತ್ಸಾಹಗಳೇ ಸಂಘಕ್ಕೆ ಶ್ರೀರಕ್ಷೆಯಾಗಿದೆ. ದೇಶ-ವಿದೇಶಗಳಿಂದ ಸಮಾಜದ ಪ್ರಮುಖ ಗಣ್ಯರುಪ ಆಗಮಿಸಿ ನಮ್ಮನ್ನು ಹುರಿದುಂಬಿಸಿ, ಆಶೀರ್ವದಿಸಿದ್ದು ಹರ್ಷ ತಂದಿದೆ ಎಂದರು.
ವೇದಿಕೆಯಲ್ಲಿ ಸಂಭ್ರಮಾಚರಣೆಯ ಕಾರ್ಯಾಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ನಿಕಟಪೂರ್ವ ಅಧ್ಯಕ್ಷ ಹಿರಿಯಡ್ಕ ಮೋಹನ್‌ದಾಸ್, ಸಂಘದ ಉಪಾಧ್ಯಕ್ಷರುಗಳಾದ ರವಿ ಎಸ್.ದೇವಾಡಿಗ, ಕೆ.ಎನ್.ದೇವಾಡಿಗ, ಗೌರವ ಕಾರ್ಯದರ್ಶಿ ಪದ್ಮನಾಭ ಎ.ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ಮಾಲತಿ ಮೊಯಿಲಿ, ಗಣೇಶ್ ಶೇರಿಗಾರ್, ಕೋಶಾಧಿಕಾಗಳಾದ ವಿಶ್ವನಾಥ ಬಿ.ದೇವಾಡಿಗ , ದಯಾನಂದ ಆರ್.ದೇವಾಡಿಗ ಮತ್ತು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ರಾಮಚಂದ್ರ ದೇವಾಡಿಗ, ಸತೀಶ್ ಕಣ್ವತೀರ್ಥ, ರಾಮಣ್ಣ ಬಿ.ದೇವಾಡಿಗ, ನರೇಶ್ ಎಸ್.ದೇವಾಡಿಗ, ಸದಾಶಿವ ಸೇರೆಗಾರ್, ಪಿ.ವಿ.ಎಸ್.ಮೊಯಿಲಿ, ಸುಂದರ ಮೊಯಿಲಿ, ಅಶೋಕ್ ದೇವಾಡಿಗ, ಆನಂದ ದೇವಾಡಿಗ, ಶ್ರೀಧರ್ ಆರ್.ದೇವಾಡಿಗ, ಸಂಘದ ವಿವಿಧ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಭಾರತಿ ನಿಟ್ಟೆಕರ್, ರಜನಿ ಮೊಯಿಲಿ, ರಘು ಎ.ಮೊಯಿಲಿ, ಎಡ್ಟಕೇಟ್ ಪ್ರಭಾಕರ್ ದೇವಾಡಿಗ, ರಮೇಶ್ ದೇವಾಡಿಗ, ವಾಸು ಟಿ.ದೇವಾಡಿಗ, ಧೀಕ್ಷಿತ್ ಎಲ್.ದೇವಾಡಿಗ, ಮಾಜಿ ಅಧ್ಯಕ್ಷರುಗಳಾದ ಎಸ್.ಕೆ.ಶ್ರೀಯಾನ್, ಎಸ್.ಪಿ.ಕರ್ಮರನ್, ಜೆ.ಕೆ.ಮೊಯಿಲಿ, ಕೆ.ಮೋಹನ್‌ದಾಸ್, ದಿವಾಕರ್ ದೇವಾಡಿಗ, ಕೆ.ಕೆ.ನಂದ, ಎನ್.ಜಿ.ಪಡುಬಿದ್ರಿ ಹಾಗೂ ಅಕ್ಷಯ ಕ್ರೆಡಿಟ್ ಕೋಪರೇಟಿವ್‌ನ ಕಾರ್ಯಾಧ್ಯಕ್ಷ ಹಾಗೂ ಸಂಘದ ಮಾಜಿ ಅಧ್ಯಕ್ಷ ಗೋಪಾಲ ಮೊಯಿಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಸಂಭ್ರಮಾಚರಣೆಯ ಕಾರ್ಯಾಧ್ಯಕ್ಷ ಧರ್ಮಪಾಲ್ ದೇವಾಡಿಗ ಸ್ವಾಗತಿಸಿದರು. ಹಿರಿಯಡ್ಕ ಮೋಹನ್‌ದಾಸ್ ಪ್ರಾಸ್ತಾವಿಕವಾಗಿ ಮಾನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಂಘದ ಮಾಜಿ ಅಧ್ಯಕ್ಷ ಕೆ.ಮೋಹನ್‌ದಾಸ್ ಹಾಗೂ ಜಿಲ್ಲೆಗಳಿಂದ ಆಗಮಿಸಿದ ವಿವಿಧ ದೇವಾಡಿಗ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳಾದ ಶಂಕರ್ ದೇವಾಡಿಗ, ನಾರಾಯಣ ದೇವಾಡಿಗ, ರತ್ನಾಕರ ಮೊಯಿಲಿ, ಜನಾರ್ದನ ಪಡಪಣಂಬೂರು ಹಾಗೂ ನರೇಶ್ ದೇವಾಡಿಗ ಅವರು ಸಂಭ್ರಮಾಚರಣೆ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು.
ಗೌರವ ಕಾರ್ಯದರ್ಶಿ ಪದ್ಮನಾಭ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರಜನಿ ಮೊಯಿಲಿ ಪ್ರಾರ್ಥಿಸಿದರು. ಮಾಲತಿ ಮೊಯಿಲಿ ಅಭಾರ ಮನ್ನಿಸಿದರು. ಆ ಬಳಿಕ ಪ್ರಾದೇಶಿಕ ಸಮಿತಿಯ ಸದಸ್ಯರಿಂದ, ಮಹಿಳಾ ವಿಭಾಗದ ಸದಸ್ಯರಿಂದ, ಗುಣಪಾಲ ಉಡುಪಿ ನಿರ್ದೇಶನದಲ್ಲಿ ‘ಸತ್ಯದ ಬೊಲ್ಪು’ ತುಳು ನಾಟಕ ಪ್ರದರ್ಶನಗೊಂಡಿತು.
ಬೆಳಗ್ಗೆ ಭವನದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ನಡೆದ ನಂತರ ಸಂಘದ ಅಧ್ಯಕ್ಷ ವಾಸು ಎಸ್.ದೇವಾಡಿಗ ಅವರು ಸಂಘ ಧ್ವಜವನ್ನು ಅನಾವರಣಗೊಳಿಸಿದರು. ಪ್ರಸಿದ್ಧಿ ಪಡೆದ ಧಾರ್ಮಿಕ ಕ್ಷೇತ್ರಗಳ ಕೇಂದ್ರಗಳವಾಗಿರುವ ನೆರುಳ್‌ನಲ್ಲಿರುವ ದೇವಾಡಿಗ ಭವನದಲ್ಲಿ ದೇವಾಡಿಗ ಸಮಾಜ ಬಾಂಧವರು, ವಿವಿಧ ಜಾತಿಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಮಾಜ ಬಂಧುಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮಾರಂಭಕ್ಕೆ ಮೆರುಗು ನೀಡಿದರು.