ಉಳ್ಳಾಲ: ಸಂಸ್ಥೆಯೊಂದು ರಾಷ್ಟ್ರೀಯಮಟ್ಟದಲ್ಲಿ ಹೆಸರುಪಡೆಯಬೇಕಾದರೆ ಅದಕ್ಕೆ ತಕ್ಕುದಾದ ಅರ್ಹತೆ, ಸ್ಥಾನಮಾನ ಇರಬೇಕು. ಇಲ್ಲದಿದ್ದಲ್ಲಿ ರಾಷ್ಟ್ರೀಯಮಟ್ಟದಲ್ಲಿ ಹೆಸರು ಸಿಗದು. ಉಳ್ಳಾಲದಲ್ಲಿರುವ ದಅವಾ ಕಾಲೇಜು ರಾಷ್ಟ್ರೀಯಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಇಲ್ಲಿನ ಶಿಕ್ಷಣ,ಲೌಕಿಕ ಶಿಕ್ಷಣ ಉತ್ತಮ ಹಂತದಲ್ಲಿರುವುದರಿಂದ ಇಲ್ಲಿಗೆ ಹೆಸರು ಬಂದಿದೆ ಎಂದು ಬಶೀರ್ ಫೈಝಿ ವೆಣ್ಣಕೋಡ್ ಹೇಳಿದರು.
ಅವರು ಉಳ್ಳಾಲ ಉರೂಸ್ ಪ್ರಯುಕ್ತ ರಾಷ್ಡ್ರೀಯ ದಅವಾ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿ ಮಾತನಾಡಿದರು.ದಶಕಗಳ ಹಿಂದೆ ಹೋದರೆ ನಮಗೆ ಕಾಣ ಸಿಗುತ್ತಿದ್ದದ್ದು ಸರಕಾರಿ ಶಾಲೆಗಳು ಮಾತ್ರ. ಪ್ರಸಕ್ತ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿರುವುದರಿಂದ ಸರಕಾರಕ್ಕೆ ಶಿಕ್ಷಣ ಅಭಿವೃದ್ಧಿ ಪಡಿಸಲು ಪ್ರೇರಣೆ ಸಿಕ್ಕಿದಂತಾಗಿದೆ. ಈಗ ಸಾಧಾರಣ ಜನರು ತಮ್ಮ ಮಕ್ಕಳನ್ನು ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸುತ್ತಾರೆ. ಅವರು ಹಣ ಇದ್ದ ಕಾರಣ ಡೊನೇಶನ್ ಕಟ್ಟಿ ಶಾಲೆಗೆ ಕಳುಹಿಸುತ್ತಾರೆ. ಇದನ್ನು ವಿರೋಧಿಸುವ ಅಗತ್ಯವಿಲ್ಲ. ಶಿಕ್ಷಣ ಕೇಂದ್ರ ಬೆಳೆದರೆ ಮಾತ್ರ ಕ್ಷೇತ್ರ ಬೆಳೆಯಬಹುದು ಎಂದರು.
ಶಾಹುಲ್ ಹಮೀದ್ ಬಾಖವಿ ಶಾಂತಪುರ ಮಾತನಾಡಿ,ಉಳ್ಳಾಲ ಉರೂಸ್‌ನ ಸಂಭ್ರದಲ್ಲಿ ದಅವಾ ಕಾಲೇಜ್ ವಿದ್ಯಾರ್ಥಿಗಳ ಕಾರ್ಯಕ್ರಮ ದರ್ಗಾ ಸಮಿತಿ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಮಾತ್ರ ಹಮ್ಮಸ್ಸು, ಉತ್ಸಾಹ ಬರುತ್ತದೆ. ಅಲ್ಲದೇ ಇಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮ ಕೂಡಾ ಉತ್ತಮವಾಗಿ ನಡೆದಿದೆ.ಪ್ರಸಕ್ತ ಕಾಲದಲ್ಲಿ ಇಂಗ್ಲಿಷ್ ಭಾಷೆ ಅಗತ್ಯವಾಗಿ ಬೇಕಾಗಿದೆ. ಇಂಗ್ಲಿಷ್ ಗೊತ್ತಿದ್ದವನಿಗೆ ಜಗತ್ತು ಗೆಲ್ಲಬಹುದು. ರಾಜ್ಯ ಭಾಷೆಗೆ ಸ್ಥಾನಮಾನ ನೀಡಬೇಕು ಎನ್ನುತ್ತಾರೆ. ಆದರೆ ಇಂಗ್ಲಿಷ್ ಭಾಷೆಯ ತಿಳುವಳಿಕೆ ಇಲ್ಲದಿದ್ದಲ್ಲಿ ಶಿಕ್ಷಣದಲ್ಲಿ ಮುಂದುವರಿಯಲು ಆಗದು ಎಂದರು.
ದಅವಾ ಫೆಸ್ಟ್ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ದಅವಾ ಕಾಲೇಜ್ ವಿದ್ಯಾರ್ಥಿಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಟ್ರೋಫಿ ನೀಡಿ ಗೌರವಿಸಲಾಯಿತು. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದರ್ಗಾ ಅಧ್ಯಕ್ಷ ಯುಎಸ್. ಹಂಝ ಅವರು ವಿಜೇತ ತಂಡಗಳಿಗೆ ಟ್ರೋಫಿ ವಿತರಣೆ ಮಾಡಿದರು. ಮಹಮ್ಮದ್ ಇಕ್ಬಾಲ್ ಉಳ್ಳಾಲ್, ಅಬ್ದುಲ್ ಖಾದರ್ ಸಖಾಫಿ, ಅಬ್ದುಲ್ ಅಝೀಝ್ ಸಖಾಫಿ, ಅಬ್ದುಲ್ ಮಜೀದ್ ಸಖಾಫಿ, ಎನ್, ಮಹಮ್ಮದ್ ಹಾಜಿ,ಝಿಯಾದ್ ತಂಙಳ್ ಅಳೇಕಲ,ಅಬ್ದುಲ್ ಹಮೀದ್ ಹಾಜಿ ಮೈಸೂರು ಚಾಂಪಿಯನ್‌ಶಿಪ್ ಟ್ರೋಫಿ ವಿತರಣೆ ಮಾಡಿದರು.
ಕಾರ್ಯಕ್ರಮವನ್ನು ಅಸ್ಸಯ್ಯದ್ ಶರಫುದ್ದೀನ್ ತಂಙಳ್ ಮಂಜೇಶ್ವರ ಉದ್ಘಾಟಿಸಿದರು. ಅಬ್ದುಲ್ ಕಲಾಂ ಸಖಾಫಿ ಅಲ್‌ಅಝ್‌ಹರಿ ಪ್ರಸ್ತಾವಿಕ ಮಾತುಗಳನ್ನಾಡಿದರು.ಡಾ. ಅಬ್ದುಲ್ ಹಕೀಂ ಅಝ್‌ಹರಿ ಕಾಂತಪುರ ವಿಚಾರ ಪ್ರಸ್ತಾಪ ಮಾಡಿ ಮಾತನಾಡಿದರು. ಜಮುಲ್ಲೈಲಿ ತಂಙಳ್ ದುವಾ ನೆರವೇರಿಸಿದರು. ಖಾಝಿ ಫಝಲ್ ಕೋಯಮ್ಮ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಅತಿಥಿಗಳನ್ನು ಸ್ವಾಗತಿಸಿದರು.
ಅಹ್ಮದ್ ಬಾವಾ ಮುಸ್ಲಿಯಾರ್, ರಶೀದ್ ಮದನಿ, ಯು.ಕೆ.ಹಮೀದ್ ಹಾಜಿ, ಯೂನುಸ್ ಅಹ್ಸನಿ ಮಂಜನಾಡಿ, ಜಾಫರ್ ನೂರಾನಿ, ಶಿಹಾಬುದ್ದೀನ್ ನೂರಾನಿ, ಖಾದರ್ ಸಖಾಫಿ ಮೊಗ್ರಾಲ್,ಮುನೀರ್ ಸಖಾಫಿ, ಸಜೀರ್ ಬುಖಾರಿ, ಅಬ್ದುಲ್ ರಹ್ಮಾನ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನ ಉಳ್ಳಾಲ ದರ್ಗಾ ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಅಶ್ರಫ್ ರೈಟ್‌ವೇ, ಚಾರಿಟೇಬಲ್ ಟ್ರಸ್ಟ್‌ನ ಉಪಾಧ್ಯಕ್ಷ ಹನೀಫ್‌ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಇಬ್ರಾಹಿಂ ಅಹ್ಸನಿ ಕಾರ್ಯಕ್ರಮ ನಿರೂಪಿಸಿದರು.
_M.Arif Kalkatta