ರಾಷ್ಟ್ರೀಯ

ಪ್ರಿಯಕರನ ಜತೆಗೂಡಿ ಮಗನನ್ನೇ ಕೊಂದು ಜೈಲು ಸೇರಿದಳು

Pinterest LinkedIn Tumblr

Women-In-Jail

ಜೋಧ್‌ಪುರ , ಏ.22- ಪ್ರಿಯಕರನೊಂದಿಗೆ ಸೇರಿ ತನ್ನ ಮಗನನ್ನೇ ಹತ್ಯೆ ಮಾಡಿರುವ ಆರೋಪದಲ್ಲಿ ಪ್ರಿಯಕರ, ಮಹಿಳೆ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಜ್ಯೋತಿಶರ್ಮಾ ಎಂಬ ಮಹಿಳೆ ತನ್ನ ಮನೆ ಮಾಲೀಕ ಷೇರ್‌ಸಿಂಗ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಮಗ ಭೂಪೇಂದ್ರ ಅಡ್ಡಿ ಮಾಡಬಹುದು ಎಂದು ಭಾವಿಸಿ ಮಗನ ಹತ್ಯೆಗೆ ಸಂಚು ರೂಪಿಸಿದಳು. ಸುಪಾರಿ ಹಂತಕನೊಬ್ಬನನ್ನು ತನ್ನ ಪ್ರಿಯಕರ ಷೇರ್‌ಸಿಂಗ್ ಮೂಲಕ ಸಂಪರ್ಕಿಸಿದ ಜ್ಯೋತಿಶರ್ಮಾ ಇದಕ್ಕಾಗಿ 10 ಲಕ್ಷ ರೂ. ನೀಡಿದ್ದಳು.

2014ರ ಜೂ.1ರಿಂದ ಜ್ಯೋತಿಶರ್ಮಾ ಮಗ ಭೂಪೇಂದ್ರ ಕಾಣೆಯಾಗಿದ್ದ. ಭೂಪೇಂದ್ರನನ್ನು ಷೇರ್‌ಸಿಂಗ್, ಜ್ಯೋತಿಶರ್ಮಾ ಹಾಗೂ ಸಹಾಯಕ ಶೈಲೂ ಸೇರಿ ಹತ್ಯೆ ಮಾಡಿದ್ದರು. ಮೂವರೂ ಹಂತಕರೂ ಈಗ ಜೈಲು ಸೇರಿದ್ದಾರೆ.

Write A Comment