ಕನ್ನಡ ವಾರ್ತೆಗಳು

19ನೇ ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಆಹ್ವಾನ ಪತ್ರಿಕೆ ಬಿಡುಗಡೆ

Pinterest LinkedIn Tumblr

Athletics_Invitation_Rel_1

ಮಂಗಳೂರು, ಎ.23: ಕರ್ನಾಟಕ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿ ಯೇಶನ್ ಮತ್ತು ದ.ಕ. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಎ.30ರಿಂದ ಮೇ 4ರವರೆಗೆ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ 19ನೆ ರಾಷ್ಟ್ರೀಯ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭ  ಬುಧವಾರ ನಡೆಯಿತು. ಮಂಗಳಾ ಕ್ರೀಡಾಂಗಣದ ಗ್ಯಾಲರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯುವ ಸಬಲೀಕರಣ, ಕ್ರೀಡೆ ಸಚಿವ ಅಭಯಚಂದ್ರ ಜೈನ್, ಕ್ರೀಡಾಕೂಟವನ್ನು ಎ.30 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು ಎಂದು ಹೇಳಿದರು.

ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಆದಿಲ್ ಜೆ. ಸಮಾರಿವಾಲ ಧ್ವಜಾರೋಹಣಗೈಯುವರು. ರಾಜ್ಯ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಚಲನಚಿತ್ರ ನಟ ಸುನೀಲ್ ಶೆಟ್ಟಿ ಭಾಗವಹಿಸಲಿದ್ದಾರೆ. ಉಳಿದಂತೆ ರಾಜ್ಯದ 30 ಸಚಿವರು ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾ ಗಿದೆ. ಸಮಾರೋಪ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ಮಿಸ್ ಇಂಡಿಯಾ ರನ್ನರ್ ಅಪ್ ಆಫ್ರೀನ್ ವಾಝ್ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.

Athletics_Invitation_Rel_2Athletics_Invitation_Rel_3 Athletics_Invitation_Rel_4

ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾ ಖೆಯ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ ಒಂದೆರಡು ದಿನಗಳಲ್ಲಿ ಕ್ರೀಡಾಂಗಣಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ಮಂಗಳಾ ಕ್ರೀಡಾಂಗಣದ 2 ಕಡೆ ಗ್ಯಾಲರಿ ವಿಸ್ತರಣೆ ಹಾಗೂ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚುವರಿ ನಿಧಿ ಒದಗಿಸುವಂತೆ ಕ್ರೀಡಾಕೂಟಕ್ಕೆ ಆಗಮಿಸಲಿರುವ ಮುಖ್ಯಮಂತ್ರಿಯವ ರನ್ನು ಕೋರಲಾಗುವುದು ಎಂದು ಸಚಿವ ಅಭಯ ಹೇಳಿದರು.  ಕ್ರೀಡಾಕೂಟಕ್ಕೆ ಪಿ.ಟಿ.ಉಷಾರಂತಹ ಹಿರಿಯ ಅಥ್ಲೀಟ್ ಗಳೇ ರಾಯಭಾರಿಗಳು ಎಂದ ಸಚಿವ ಜೈನ್, ಉಷಾರನ್ನು ಅಭಿನಂದಿಸಿದರು.

Athletics_Invitation_Rel_6 Athletics_Invitation_Rel_7 Athletics_Invitation_Rel_8

ಡೋಪಿಂಗ್ ಪರೀಕ್ಷೆಗಾಗಿ ಸುಸಜ್ಜಿತ ವ್ಯವಸ್ಥೆ:
ಕ್ರೀಡಾಕೂಟದ ಹಿನ್ನೆಲೆಯಲ್ಲಿ ಮಂಗಳಾ ಕ್ರೀಡಾಂಗಣ ಹೊಸ ಕಳೆಯೊಂದಿಗೆ ಸಜ್ಜುಗೊಳ್ಳುತ್ತಿದೆ. ಸುಮಾರು 60 ಲಕ್ಷ ರೂ. ವೌಲ್ಯದ ಕ್ರೀಡಾ ಸಾಮಗ್ರಿಗಳಲ್ಲಿ ಶೇ.75ರಷ್ಟು ಈಗಾಗಲೇ ಮಂಗಳಾ ಕ್ರೀಡಾಂಗಣಕ್ಕೆ ತಲುಪಿದ್ದು, ಎ.26 ರೊಳಗೆ ಎಲ್ಲಾ ಸಾಮಗ್ರಿಗಳು ಪೂರೈಕೆ ಯಾಗಲಿವೆ. ಮಂಗಳಾ ಕ್ರೀಡಾಂಗಣದಲ್ಲಿ ಆರಂಭ ದಲ್ಲಿ ಪೆವಿಲಿಯನ್ ಆಗಿದ್ದ ನಾಡಾ ಕಚೇರಿಯನ್ನು ಪ್ರಸಕ್ತ ಕ್ರೀಡಾಕೂಟಕ್ಕೆ ಅಥ್ಲೀಟ್‌ಗಳ ಮಾದಕ ದ್ರವ್ಯ ಪರೀಕ್ಷಾ ಕೇಂದ್ರವಾಗಿ 9 ಲಕ್ಷ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ಮೂಡುಬಿದಿರೆಯ ಕ್ರೀಡಾಂಗಣ ಗಳನ್ನು ಆರು ತಿಂಗಳ ಹಿಂದೆಯೇ ಹುಲ್ಲು ಹಾಸು, ಬೋರ್‌ವೆಲ್, ಸ್ಪ್ರಿಂಕ್ಲರ್‌ಗಳ ವ್ಯವಸ್ಥೆಗೆ ಒಳಪಡಿಸಲಾಗಿದೆ ಎಂದು ಕ್ರೀಡಾ ಸಚಿವರು ವಿವರಿಸಿದರು. ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ 23 ವಿಧದ ಕ್ರೀಡಾ ಸ್ಪರ್ಧೆಗಳು ನಡೆ ಯಲಿವೆ. ಕಾರ್ಯಕ್ರಮದ ಅಂಗವಾಗಿ ರಾಜ್ಯದ ವಿವಿಧ ಕಲಾ ತಂಡಗಳಿಂದ ಮೆರವಣಿಗೆ, ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅಥ್ಲೀಟ್‌ಗಳು ಭಾಗವಹಿಸಲು ಅನು ಕೂಲವಾದ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಮಂಜುನಾಥ ಭಂಡಾರಿ ತಿಳಿಸಿದರು. ಮೇಯರ್ ಜೆಸಿಂತಾ ವಿಜಯಾ ಆಲ್ಫ್ರೆಡ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪೊಲೀಸ್ ಆಯುಕ್ತ ಎಸ್.ಮುರುಗನ್, ಮುಡಾ ಆಯುಕ್ತ ನಝೀರ್ ಅಹ್ಮದ್, ಕ್ರೀಡಾ ಪ್ರೇಮಿ ಸದಾನಂದ ಶೆಟ್ಟಿ, ಸುರೇಶ್ ಬಲ್ಲಾಳ್, ಪಾಂಡುರಂಗ ಮೊದಲಾದವರು ಉಪಸ್ಥಿತರಿದ್ದರು.

Athletics_Invitation_Rel_5

ಹಗಲು ಹೊತ್ತಿನಲ್ಲೇ ಹೆಚ್ಚಿನ ಕ್ರೀಡೆಗಳು: 
ಇದುವರೆಗಿನ ಎಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟಗಳು ಹಗಲು ಹೊತ್ತಿನಲ್ಲೇ ನಡೆದಿರುವಂಥದ್ದು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೊನಲು ಬೆಳಕಿನಲ್ಲಿ ಕ್ರೀಡಾ ಕೂಟ ಸಂಯೋಜಿಸುವ ಬಗ್ಗೆ ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ 1,200 ಲಕ್ಸನ್ ಬೆಳಕಿನ ವ್ಯವಸ್ಥೆಯ ಅಗತ್ಯ ವಿದೆ. ಒಂದು ವೇಳೆ ವ್ಯವಸ್ಥೆಯಲ್ಲಿ ಲೋಪವಾದಲ್ಲಿ ತಗಾದೆ ಎತ್ತುವ ಸಂಭವ ಇರುವುದರಿಂದ ಕ್ರೀಡೆಗಳನ್ನು ಹಗಲು ಹೊತ್ತಿನಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹಾಗಿದ್ದರೂ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಂಗಣಕ್ಕೆ ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಅಭಯಚಂದ್ರ ಜೈನ್ ತಿಳಿಸಿದರು. ಬೆಳಗ್ಗೆ 6ರಿಂದ 10ರವರೆಗೆ ಸಂಜೆ 4ರಿಂದ 6:30ರವರೆಗೆ ಕ್ರೀಡಾಕೂಟಗಳು ನಡೆಯಲಿವೆ. ಉಳಿದಂತೆ ಅಂತಿಮ ಸ್ಪರ್ಧೆಯಲ್ಲದ, ಪ್ರಸಕ್ತ ವ್ಯವಸ್ಥೆ ಮಾಡಲಾ ಗುವ ಹೊನಲು ಬೆಳಕಿನಲ್ಲಿ ಆಡಲು ಸಾಧ್ಯವಾಗುವ ಕೆಲವೊಂದು ಕ್ರೀಡೆಗಳನ್ನು ರಾತ್ರಿ 9ರವರೆಗೆ ನಡೆಸಲಾಗುವುದು. ಕ್ರೀಡಾಂಗಣಕ್ಕೆ ಶಾಶ್ವತ ಹೊನಲು ಬೆಳಕಿನ ವ್ಯವಸ್ಥೆಗೆ ಸುಮಾರು 4 ರಿಂದ 5 ಕೋಟಿ ರೂ.ಗಳ ಅಗತ್ಯವಿದೆ. ಹಾಗಾಗಿ ಸುಮ್ಮನೆ ಅಷ್ಟೊಂದು ಹಣವನ್ನು ವಿನಿಯೋಗಿಸುವುದು ವ್ಯರ್ಥ ಎಂಬ ನೆಲೆಯಲ್ಲಿ ಸದ್ಯ ತಾತ್ಕಾಲಿಕ ಹೊನಲು ಬೆಳಕಿನ ವ್ಯವಸ್ಥೆಯೊಂದಿಗೆ ಕ್ರೀಡೆಗಳು ನಡೆಯಲಿವೆ ಎಂದು ಸಚಿವರು ಹೇಳಿದರು.

ಕ್ರೀಡಾಕೂಟ ಯುವ ಅಥ್ಲೀಟ್‌ಗಳಿಗೆ ಪೂರಕವಾಗಲಿದೆ: ಪಿ.ಟಿ.ಉಷಾ
1986ಕ್ಕೆ ಹೋಲಿಸಿದರೆ ಇಲ್ಲಿನ ಕ್ರೀಡಾಂಗಣ ಬಹಳಷ್ಟು ಸುಸಜ್ಜಿತಗೊಂಡಿದೆ. ಯುವ ಅಥ್ಲೀಟ್‌ಗಳಿಗೆ ಈ ಫೆಡರೇಶನ್ ಕಪ್ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಲಿದೆ. ಹೆಚ್ಚಿನ ಕಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಗ್ರಾಮೀಣ ಪ್ರದೇಶದಲ್ಲಿರುತ್ತದೆ. ಆದರೆ ಮಂಗಳೂರಿನಲ್ಲಿ ನಗರದಲ್ಲೇ ಕ್ರೀಡಾಂಗಣವಿದೆ. ಆದರೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳನ್ನು ನೋಡುವಾಗ ಇದೊಂದು ಅತ್ಯುತ್ತಮ ಕ್ರೀಡಾಕೂಟವಾಗಿ ಮೂಡಿಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತವೆ ಎಂದು ಓಟದರಾಣಿ ಖ್ಯಾತಿಯ ಹಿರಿಯ ಅಥ್ಲೀಟ್ ಪಿ.ಟಿ. ಉಷಾ ಅಭಿಪ್ರಾಯಿಸಿದರು.

Write A Comment