ಉಳ್ಳಾಲ,ಎ.23: ಧಾರ್ಮಿಕ ಶಿಕ್ಷಣ ನೀಡುವ ಮುಅಲ್ಲಿಂಗಳು ಧಾರ್ಮಿಕ ವಿಚಾರಗಳ ಜತೆ ಲೌಕಿಕ ಶಿಕ್ಷಣದ ಬಗ್ಗೆ ಪೂರ್ಣರೂಪದಲ್ಲಿ ತಿಳಿದುಕೊಂಡಿರಬೇಕು. ವೈಜ್ಞಾನಿಕವಾಗಿ ಕೂಲಂಕಷ ಅರಿವು ಮುಅಲ್ಲಿಂಗಳಿದ್ದರೆ ಅವರಿಗೆ ವಿದ್ಯಾರ್ಥಿಗಳನ್ನು ಉನ್ನತ ರೂಪದಲ್ಲಿ ಶಿಕ್ಷಣ ನೀಡಲು ಸಾಧ್ಯ. ಎಂದು ಅಬ್ದುಲ್ ಅಝೀಝ್ ಫೈಝಿ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಮುಅಲ್ಲಿಂ ಸಮಾವೇಶ ಮತ್ತು ಎಸ್.ಎಂ.ತಂಙಳ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವವಹಿಸಿ ಮಾತನಾಡಿದರು.
ಇಸ್ಲಾಂನ ಮೂಲ ಸಿದ್ದಾಂತಗಳನ್ನು ಅಭ್ಯಸಿಸಿ ವಿದ್ಯಾರ್ಥಿಗಳಿಗೆ ಬೋದನೆ ನೀಡಲು ಮುಂದಾಗಬೇಕು. ಸಿದ್ದಾಂತಗಳಲ್ಲಿ ಭಿನ್ನ ನಿಲುವು ತಳೆದು ವಿದ್ಯಾರ್ಥಿಗಳನ್ನು ಗೊಂದಲದ ವಾತಾವರಣದಲ್ಲಿ ಬೆಳೆಯುವಂತಹ ಸ್ಥಿತಿ ಆಗಬಾರದು. ಪ್ರಶಕ್ತ ಕಾಲದ ಶಿಕ್ಷಣ ಬೋಧನೆಯಲ್ಲಿ ಏನು ಬದಲಾವಣೆಗಳು ಆಗಿದೆಯೋ ಅದಕ್ಕೆ ಹೊಂದಿಕೊಂಡು ಮುಅಲ್ಲಿಂಗಳು ಶಿಕ್ಷಣ ನೀಡಿದರೆ ಗೊಂದಲದ ಪ್ರಶ್ನೆ ಸೃಷ್ಟಿಯಾಗುವುದಿಲ್ಲ ಎಂದರು.
ಕೋಯಮ್ಮ ಮಾಸ್ಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ಸಾಮಾಜಿಕ, ದಾರ್ಮಿಕವಾಗಿ ತಿಳುವಳಿಕೆಯನ್ನು ಮೂಡಿಸುವುದೇ ವಿದ್ಯಾಭ್ಯಾಸವಾಗಿದೆ. ವಿದ್ಯಾಬ್ಯಾಸ ಪಡೆದ ವಿದ್ಯಾರ್ಥಿಗಳಿಗೆ ಲೋಕವನ್ನು ಅರ್ಥಮಾಡಿಕೊಳ್ಳುವಂತಹ ಶಕ್ತಿ, ಅರ್ಹತೆ ಬರಬೇಕು ಎಂದರು. ಆತೂರ್ ಸಅದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಝಿಯಾದ್ ತಂಙಳ್ ಅತಿಥಿಗಳನ್ನು ಸ್ವಾಗತಿಸಿದರು. ಮೊಹಮ್ಮದ್ ಸಾಹಿಲ್ ಕಿರಾಅತ್ ಪಠಿಸಿದರು
ಈ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಉತ್ತಮ ಸೇವೆಗೈದ ಪಟ್ಟಾಂಬಿ ಉಸ್ತಾದ್, ಯು.ನ್. ಝೈನುದ್ದೀನ್ ಮದನಿ, ಅಬೂಬಕರ್ ಮದನಿ ಕುಂಪಲರವರಿಗೆ ಎಸ್.ಎಂ. ತಂಙಳ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ , ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಕೋಯಮ್ಮ ಮಾಸ್ಟರ್, ಅಬ್ದುಲ್ ಹಮೀದ್ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಬಳಿಕ ತಾಜುಲ್ ಉಲಮಾ ಅವರ ಮೇಲೆ ಅತ್ಯಧಿಕ ದ್ಸಿಕ್ರ್ ಹೇಳಿದ ಮಾರ್ಗತಲೆ ಮಹದನುಲ್ ಉಲೂಂ ಮದ್ರಸಕ್ಕೆ ತಾಜುಲ್ ಉಲಮಾ ಪ್ರಶಸ್ತಿ ನೀಡಲಾಯಿತು.
ಸಚಿವ ಯು.ಟಿ. ಖಾದರ್, ಸಿದ್ದೀಕ್ ಮೋಂಟುಗೋಳಿ,ಅಬ್ದುಲ್ ಹಮೀದ್, ಕೆ.ಕೆ. ಮೊಯ್ಯದ್ದೀನ್ ಕಾಮಿಲ್ ಸಖಾಫಿ, ಅಬೂಬಕರ್ ಮದನಿ, ಎನ್.ಡಿ. ಅಬೂಬಕರ್ ಮದನಿ ಅಳೇಕಲ,ಝೈನುದ್ದೀನ್ ಮದನಿ, ಎಸಿಎಂ ಕಾಂತಪುರಂ, ಅಬ್ದುಲ್ ಅಹ್‌ಸನಿ ಬೆಂಗಳೂರು, ಹನೀಫ್ ಮಿಸ್ಬಾಯಿ, ಯೂಸುಫ್ ಸಖಾಫಿ ಯೂಸುಫ್ ಮಿಸ್ಬಾಯಿ ಹಮೀದ್ ಮದನಿ, ಪಟ್ಟಾಂಬಿ ಉಸ್ತಾದ್, ಇಸ್ಮಾಯಿಲ್ ಸಅದಿ ಮೂರುಗೋಳಿ, ಅಬೂಬಕರ್ ಮದನಿ ಕುಂಪಲ, ಇಸ್ಮಾಯಿಲ್ ಮದನಿ ನೆಕ್ಕಿಲಾಡಿ,ಯೂನುಸ್ ಇಂದಾರಿ, ಝಿಯಾದ್ ತಂಙಳ್, ಬಾಝಿಲ್ ಡಿ ಸೋಜ, ಯು.ಎ. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು. ಆರ್.ಕೆ. ಮದನಿ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು.
ಆರೀಫ್ ಕಲ್ಲಕಟ್ಟ_