ಮಂಗಳೂರು,ಎ.23 : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರ ನಿಧಿಯಿಂದ ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಮಣ್ಣಗುಡ್ಡೆ ವಾರ್ಡಿನ ಮಿಷನ್ ಗೋರಿ ರಸ್ತೆಯ ವಿಶ್ರಾಂತಿ ಚರ್ಚ್ ಸೆಮಿಟರಿಯನ್ನು ಶಾಸಕ ಶ್ರೀ ಜೆ. ಆರ್. ಲೋಬೊ ಉದ್ಫಾಟಿಸಿದರು.
ಈ ಸಂದರ್ಭದಲ್ಲಿ ಸಭಾ ಪಾಲಕರಾದ ರೆ. ಫಾ. ವಿನ್ಫ್ರೆಡ್ ಅಮ್ಮಣ್ಣ, ರೆ. ಫಾ. ವಿನಯಲಾಲ್ ಬಂಗೇರ, ಸಭಾ ಪರಿಪಾಲನಾ ಸಮಿತಿಯ ಸದಸ್ಯರಾದ ಕ್ಲಿಫರ್ಡ್ ಸೋನ್ಸ್, ಜಯರಾಜ್ ಕೋಟ್ಯಾನ್, ರೋಜಿ, ಅಡ್ಲಿನ್, ಶಾಂತ, ಸಚಿನ್, ವಿನ್ಸೆಂಟ್, ಪ್ರಶಾಂತ್, ಯುವ ಕಾಂಗ್ರೆಸ್ನ ಚೇತನ್ ಕುಮಾರ್, ರಮಾನಂದ ಪೂಜಾರಿ, ಮಾಜಿ ಮನಪಾ ಸದಸ್ಯ ಕಮಲಾಕ್ಷ ಸಾಲಿಯಾನ್ ಉಪಸ್ಥಿತರಿದ್ದರು.