ಮನೋರಂಜನೆ

ಹರಿಪ್ರಿಯಾ ನಟನೆಯ ಮೂರು ಸಿನೆಮಾಗಳು ಬಿಡುಗಡೆಗೆ ಸಿದ್ಧ

Pinterest LinkedIn Tumblr

Hariprriya

ಬೆಂಗಳೂರು: ಈಗಷ್ಟೆ ‘ಬುಲೆಟ್ ಬಸ್ಯಾ’ ಚಿತ್ರೀಕರಣ ಮುಗಿಸಿರುವ ನಟಿ ಹರಿಪ್ರಿಯಾ ಅವರ ಮೂರು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ‘ರನ್ನ’ ಮತ್ತು ‘ರಣತಂತ್ರ’ ಸಿನೆಮಾಗಳು ಬಿಡುಗಡೆಗೆ ಕಾಯುತ್ತಿದ್ದು, ಜೊತೆಜೊತೆಯಲ್ಲೇ ‘ರಿಕ್ಕಿ’ ಮತ್ತು ‘ರಾಜಧಾನಿ-೨’ ಸಿನೆಮಾಗಳ ಚಿತ್ರಿಕರಣವೂ ಪ್ರಗತಿಯಲ್ಲಿದೆ. ರಾಜಧಾನಿ-೨ ಸಿನೆಮಾದ ೨ ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದ್ದು ಅದೂ ಕೂಡ ಶೀಘ್ರದಲ್ಲೆ ಬಿಡುಗಡೆ ಕಾಣುವ ಸಾಧ್ಯತೆ ಇದೆ.

‘ಬುಲೆಟ್ ಬಸ್ಯಾ’ ಸಿನೆಮಾದ ಕೊನೆಯ ಹಂತದ ಚಿತ್ರೀಕರಣ, ಒಂದು ಹಾಡನ್ನು ಬ್ಯಾಂಕಾಂಗ್ ನಲ್ಲಿ ಚಿತ್ರೀಕರಣ ಮುಗಿಸಿದ ಹರಿಪ್ರಿಯ ಸಂತಸಗೊಂಡಿದ್ದು “ಸ್ಟ್ರಾಬೆರ್ರಿ ಪಟ್ಟಣ ಮತ್ತು ಡ್ರಾಗನ್ ಹಳ್ಳಿಯಲ್ಲಿ ಈ ಹಾಡು ಚಿತ್ರೀಕರಣಗೊಂಡಿದೆ. ಇವೆರಡು ಕನ್ನಡ ಸಿನೆಮಾಗಳಿಗೆ ಹೊಸ ಜಾಗಗಳು” ಎಂದಿದ್ದಾರೆ.

ಹಳ್ಳಿ ಹುಡುಗಿಯ ಪಾತ್ರ ನಿರ್ವಹಿಸಿರುವ ಹರಿಪ್ರಿಯಾ, ಈ ಕಲ್ಪನೆಯ ಹಾಡಿನಲ್ಲಿ ಗ್ಲ್ಯಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರಂತೆ. “ಇದು ಶರಣ್ ಜೊತೆಗಿನ ಡ್ಯುಯೆಟ್ ಹಾಡು” ಎನ್ನುತ್ತಾರೆ ಹರಿಪ್ರಿಯ. “ಸುಡು ಬಿಸಿಲಿನಲ್ಲಿ ಈ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೆ ವಿಪರೀತ ಟ್ರಾಫಿಕ್ ಜಾಮ್ ಇರುತ್ತಿತ್ತು. ಇವೆಲ್ಲದರ ಹೊರತಾಗಿಯೂ ‘ಬುಲೆಟ್ ಬಸ್ಯಾ’ ಗೆ ಕೆಲಸ ಮಾಡಲು ಅತೀವ ಸಂತಸವಾಗಿದೆ” ಎನ್ನುತ್ತಾರೆ ಹರಿಪ್ರಿಯ.

Write A Comment