ಇತ್ತೀಚಿಗೆ ವೇಶ್ಯಾವಾಟಿಕೆ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಟಾಲಿವುಡ್ ನಟಿ ಶ್ವೇತಾ ಬಸು ಅವರು, ಬೆತ್ತಲೆ ವಿಡಿಯೋ ಲೀಕ್ ಘಟನೆಗೆ ಸಂಬಂಧಿಸಿದಂತೆ ಹಾಟ್ ನಟಿ ರಾಧಿಕಾ ಆಪ್ಟೆ ಅವರ ಬೆಂಬಲಕ್ಕೆ ನಿಂತಿದ್ದಾರೆ.
ವರದಿಗಳ ಪ್ರಕಾರ, ರಾಧಿಕಾ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಅವರನ್ನು ಶ್ವೇತಾ ಬಸು ಶ್ಲಾಘಿಸಿದ್ದಾರೆ. ಆ ದೃಶ್ಯ ಕಲಾತ್ಮಕವಾಗಿ ಮೂಡಿ ಬಂದಿದೆ ಎಂದು ಶ್ವೇತಾ ನಿರ್ದೇಶಕ ಕಶ್ಯಪ್ ಮತ್ತು ನಟಿ ರಾಧಿಕಾ ಅವರನ್ನು ಹೊಗಳಿದ್ದಾರೆ. ಅಲ್ಲದೆ ಆ ದೃಶ್ಯ ಚಿತ್ರೀಕರಣಗೊಳ್ಳುತ್ತಿದ್ದಾಗ ಸೆಟ್ನಲ್ಲಿದ್ದ ಇಬ್ಬರು ಮಹಿಳೆಯರ ಪೈಕಿ ಶ್ವೇತಾ ಕೂಡ ಒಬ್ಬರಾಗಿದ್ದರು.
ರಾಧಿಕಾ ಆಪ್ಟೆ ಅವರ ಸಿನಿಮಾದ ಬಗ್ಗೆ ಜನ ನೀಡಿದ ಮಿಶ್ರ ಪ್ರತಿಕ್ರಿಯೆಯನ್ನು ಮುಂದಿಟ್ಟುಕೊಂಡು ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡದಿರುವ ನಿರ್ದೇಶಕರ ನಿರ್ಧಾರ ಸರಿಯಾಗಿದೆ ಎಂದು ಶ್ವೇತಾ ಬಸು ಅಭಿಪ್ರಾಯ ಪಟ್ಟಿದ್ದಾರೆ.
ಅಂತರ್ಜಾಲದಲ್ಲಿ ನಗ್ನ ಚಿತ್ರಗಳು ಬಿಡುಗಡೆಗೊಳಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಹಾಟ್ ನಟಿ ರಾಧಿಕಾ ಆಪ್ಟೆ ಅವರು ನಟಿಸಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ಶಾರ್ಟ್ ಫಿಲ್ಮ್ ನ ಹಾಟ್ ವೀಡಿಯೋಗಳು ವಾಟ್ಸ್ ಅಪ್ ನಲ್ಲಿ ಲೀಕ್ ಆಗಿದ್ದವು. ಈ ವೀಡಿಯೋ ವಿವಾದ ಸೃಷ್ಟಿಸಿತ್ತಲ್ಲದೇ, ರಾಧಿಕಾ ಆಪ್ಟೆ ಕುರಿತಂತೆ ಹಲವು ಚರ್ಚೆಗಳು ಆರಂಭವಾಗಿದ್ದವು.