Uncategorized

ಸೇನೆಗೆ ಆಕಾಶ್ ಕ್ಷಿಪಣಿ ನಿಯೋಜನೆ

Pinterest LinkedIn Tumblr

000175B___

ಹೊಸದಿಲ್ಲಿ, ಮೇ 5: ಸಂಭಾವ್ಯ ವಾಯು ದಾಳಿ ಬೆದರಿಕೆಯ ವಿರುದ್ಧದ ಪ್ರಬಲ ರಕ್ಷಣಾ ಕವಚ ಆಕಾಶ್ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ಸೇನೆಗೆ ಮಂಗಳವಾರ ಸೇರಿಸಿಕೊಳ್ಳಲಾಗಿದೆ.

ಶತ್ರುವಿನ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಮತ್ತು ಮಾನವರಹಿತ ಆಕಾಶ ನೌಕೆಗಳಿಂದ ಎದುರಾಗುವ ವಾಯು ಬೆದರಿಕೆಗಳನ್ನು ಗರಿಷ್ಠ 25 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು 20 ಕಿ.ಮೀ. ಎತ್ತರದವರೆಗೆ ಈ ಸ್ವದೇಶಿ ನಿರ್ಮಿತ ವ್ಯವಸ್ಥೆ ತಡೆಯುತ್ತದೆ.

ಸುದೀರ್ಘ 32 ವರ್ಷಗಳ ಕಾಯುವಿಕೆಯ ಬಳಿಕ ಈ ವ್ಯವಸ್ಥೆಯನ್ನು ಭಾರತೀಯ ಸೇನೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಇದು ರಕ್ಷಣಾ ಸಂಶೋಧನಾ ಅಭಿವೃದ್ಧಿ ಪ್ರಯೋಗಾಲಯ ಅಭಿವೃದ್ಧಿಪಡಿಸಿದ, ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕಿರು ವ್ಯಾಪ್ತಿಯ ರಕ್ಷಣಾ ವ್ಯವಸ್ಥೆಯಾಗಿದೆ. ಸಂಭಾವ್ಯ ಅಪಾಯವನ್ನು ಅದು ಗ್ರಹಿಸಬಲ್ಲದು, ಅಪಾಯದ ದಿಕ್ಕನ್ನು ಗುರುತಿಸಬಲ್ಲದು ಹಾಗೂ ರಾಡಾರ್ ವ್ಯವಸ್ಥೆಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ಕ್ಷಿಪಣಿಯನ್ನು ಹಾರಿಸಬಲ್ಲದು.

ಡಿಆರ್‌ಡಿಒ 1983ರಿಂದಲೂ ಈ ಯೋಜನೆ ಬಗ್ಗೆ ಕೆಲಸ ಮಾಡುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಸೇನೆಯು ಎರಡು ಆಕಾಶ್ ರೆಜಿಮೆಂಟ್‌ಗಳನ್ನು ಪಡೆಯಲಿದೆ.

Write A Comment