ಕನ್ನಡ ವಾರ್ತೆಗಳು

ಎಂಆರ್‌ಪಿಎಲ್ ನಲ್ಲಿ ಇಂಧನ ಕೊರತೆ ಇಲ್ಲ : ಡಿಜಿಎಂ ಲಕ್ಷ್ಮೀ ಎಂ. ಕುಮಾರನ್ ಸ್ಪಷ್ಟನೆ

Pinterest LinkedIn Tumblr

ongc_mrpl_laskmi

ಮಂಗಳೂರು,ಮೇ.06 : ಮಂಗಳೂರು ರಿಫೈನರೀಸ್ ಆ್ಯಂಡ್ ಪೆಟ್ರೋಕೆಮಿಕಲ್ಸ್ ನಲ್ಲಿ ಇಂಧನ ಕೊರತೆ ಇಲ್ಲ ಎಂದು ಎಂಆರ್‌ಪಿಎಲ್ ಸ್ಪಷ್ಟ ಪಡಿಸಿದೆ. ಎಂಆರ್‌ಪಿಎಲ್‌ನ ಘಟಕಗಳು ಸ್ಥಗಿತಗೊಂಡಿರುವುದರಿಂದ ಇಂಧನದ ಕೊರತೆ ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ಸಂಸ್ಥೆಯು ಸ್ಪಷ್ಟನೆ ನೀಡಿದೆ.

ಪೂರ್ವ ನಿರ್ಧಾರದಂತೆ ಏಪ್ರಿಲ್ ಮೊದಲ ವಾರದಲ್ಲಿ ಉತ್ಪಾದನೆ ಘಟಕ ಭಾಗಶಃ ಬಂದ್ ಮಾಡಲಾಗಿತ್ತು. ಆದರೆ ಇಂಧನ ಪೂರೈಕೆಗೆ ಯಾವುದೇ ತೊಂದರೆ ಆಗಿರಲಿಲ್ಲ ಎಂದು ಉತ್ಪಾದನೆ ಮತ್ತು ಯೋಜನಾ ವಿಭಾಗದ ಪ್ರಧಾನ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ ಎಂದು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಕಮ್ಯುನಿಕೇಷನ್ ಮತ್ತು ಕೌಶಲ್ಯಾಭಿವೃದ್ಧಿ ಕೇಂದ್ರದ ಡಿಜಿಎಂ ಲಕ್ಷ್ಮೀ ಎಂ. ಕುಮಾರನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Write A Comment