ದುಬೈ: ಎಮಿರೇಟ್ಸ್ ಇಂಡಿಯಾ ಫ್ರಟರ್ನಿಟಿ ಫೋರಮ್ ಯು ಏ ಇ, ಕರ್ನಾಟಕದ ವತಿಯಿಂದ ಆಯೋಜಿಸಲಿರುವ “Go Fest UAE -2015” ಮೇ 29 ರಂದು ದುಬೈ ಅಲ್ ಕ಼ುಸೈಸ್ ಬಿಲ್ವ ಸ್ಕೂಲಿನ ಸುಸಜ್ಜಿತ ಸಭಾಂಗಣದಲ್ಲಿ ನಡೆಯಲಿದೆ.
ಅನಿವಾಸಿ ಭಾರತೀಯ ಕುಟುಂಬಗಲಿಗೋಸ್ಕರ “Go Fest UAE – 2015 ” where families unite ಎಂಬ ಶೀರ್ಷಿಕೆಯಲ್ಲಿ ಸಂಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಿಣ್ಣರಿಗಾಗಿ ರಸಪ್ರಶ್ನೆ, ಚಿತ್ರ ಬಿಡಿಸುವಿಕೆ , ಗಾಯನ ಸ್ಪರ್ಧೆಗಳು ಹಾಗು ಪುರುಷ ಮತ್ತು ಮಹಿಳೆಯರಿಗಾಗಿ ರಸಪ್ರಶ್ನೆ, ಸ್ವಾದಿಷ್ಟ ಅಡುಗೆ ಹಾಗು ಇನ್ನಿತರ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ
ಕಾರ್ಯಕ್ರಮದಲ್ಲಿ “ಹೆಲ್ತ್ ಅವಾರ್ನೆಸ್ಸ್” ಹಾಗು ಪುಟಾಣಿ ಕಲಾವಿದರ “ರೆಸ್ಪೆಕ್ಟ್ ಟು ಸೀನಿಯರ್ಸ್” ನಾಟಕ ಇತಿಹಾಸವನ್ನು ನಿರ್ಮಿಸಲಿದೆ. ಈ ಕಾರ್ಯಕ್ರಮದ ಲಾಂಛನ ಮತ್ತು ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಬಿಡುಗಡೆ ಗೊಲಿಸಲಾಗಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸಾಮಾಜಿಕ ತಾಣಗಳಾದ ಫೇಸ್ಬುಕ್ , ವಾಟ್ಸಾಪ್ ಮುಖಾಂತರ ನೊಂದಾವಣೆ ಮಾಡಿಕೊಳ್ಳಬಹುದು ಅಲ್ಲದೇ ದೂರವಾಣಿ ಕರೆಯ ಮುಖಾಂತರವೂ ತಮ್ಮ ನೋಂದಾವಣಿಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.
ದೂರವಾಣಿ ಸಂಖ್ಯೆ: 0554929323 , 0554505431 , 0558717733
ಚಿಣ್ಣರ ಗಾಯನ ಸ್ಪರ್ಧೆಯು ವಿಶೇಷ ಆಕರ್ಷಣೆ ಯಾಗಲಿದ್ದು ಭಾಗವಹಿಸುವ ಪುಟಾಣಿಗಳ ಆಯ್ಕೆ ಪ್ರಕ್ರಿಯೆಯು ಈಗಾಗಲೇ ಫ್ರಾರಂಭ ವಾಗಿದ‍್ದು ಭಾಗವಹಿಸುವಪುಟಾಣಿಗಳ ೨ ನಿಮಿಷಗಳ ಗಾಯನದ ವೀಡಿಯೋ ರೆಕಾರ್ಡಿಂಗನ್ನು ವಾಟ್ಸಾಪ್ ಸಂಖ್ಯೆ : 0555971237 ಗೆ ಕಳುಹಿಸಬಹುದೆಂದೂ ಅಂತಿಮ ಹಂತದ ಸ್ಪರ್ಧಿಗಳನ್ನು ಪರಿಣತ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.