ಮಂಗಳೂರು,ಮೇ.06 : ಇತ್ತೀಚೆಗೆ ಭೀಕರ ಭೂಕಂಪಕ್ಕೀಡಾದ ನೇಪಾಳ ಪರಿಹಾರ ನಿಧಿಗೆ ದೇಣಿಗೆಯಾಗಿ ಮಾಜಿ ಶಾಸಕ ಕೆ. ವಿಜಯ ಕುಮಾರ್ ಶೆಟ್ಟಿಯವರು ತನ್ನ ಒಂದು ತಿಂಗಳ ಪಿಂಚಣಿ ರೂ. 34,000 ದ ಚೆಕ್ಕನ್ನು ದ.ಕ ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂರಿಗೆ ಹಸ್ತಾಂತರಿಸಿದರು.
ಉಪಮೇಯರ್ ಪುರುಷೋತ್ತಮ್ ಚಿತ್ರಾಪುರ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುಸೈನ್ ಕಾಟಿಪಳ್ಳ ಮತ್ತು ಕಾರ್ಯದರ್ಶಿ ಕುಮಾರ್ ಮೆಂಡನ್ ಮೊದಲಾದವರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.