ತುಮಕೂರು, ಮೇ 11: ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿಕೊಂಡು ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿರುವ ಬಿಲ್ಡರ್ಸ್ಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತುವರಿ ತೆರವು ಕಾರ್ಯಾಚರಣೆಯಿಂದ ನಷ್ಟಕ್ಕೊಳಗಾದವರಿಗೆ ಸಂಬಂಸಿದ ಬಿಲ್ಡರಸ್ುವಗಳಿಂದಲೇ ಪರಿಹಾರ ಕೊಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು.
ಬೆಂಗಳೂರು ಭೂಗಳ್ಳರ ತಾಣವಾಗಲು ಬಿಡುವುದಿಲ್ಲ. ಕೆರೆ ಒತ್ತುವರಿ ಮಾಡಿ ಅಪಾರ್ಟ್ಮೆಂಟನ್ನು ನಿರ್ಮಿಸಿ ಸಾರ್ವಜನಿಕರನ್ನು ವಂಚಿಸುತ್ತಿರುವ ಬಿಲ್ಡರ್ಸ್ಲ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದು ಶತಸಿದ್ಧ. ಮನೆ ಕಳೆದುಕೊಂಡು ವಂಚನೆಗೊಳಗಾದ ಸಂತ್ರಸ್ಥರು ಆತಂಕಪಡುವ ಅವಶ್ಯಕತೆಯಿಲ್ಲ. ಬಿಲ್ಡರಸ್ಲ್ಗಳಿಂದಲೇ ಪರಿಹಾರ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
ಈವರೆಗೂ 3960 ಎಕರೆ ತೆರವು: ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬಂದ ನಂತರ ಎ.ಟಿ.ರಾಮಸ್ವಾಮಿ, ಬಾಲಸುಬ್ರಹ್ಮಣ್ಯ ಅವರ ವರದಿ ಆಧರಿಸಿ 3960 ಎಕರೆ ಸರ್ಕಾರಿ ಭೂಮಿ ತೆರವುಗೊಳಿಸಲಾಗಿದೆ. ಇದರಲ್ಲಿ ಕೆರೆ ಒತ್ತುವರಿ ಕೂಡ ಸೇರಿದೆ. ಒಟ್ಟು 25 ಸಾವಿರ ಕೋಟಿಗೂ ಹೆಚ್ಚು ಬೆಲೆಬಾಳುವ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಎ.ಟಿ.ರಾಮಸ್ವಾಮಿ ನೀಡಿರುವ ವರದಿಯಲ್ಲಿ ಪ್ರಸ್ತಾಪಿಸಿದ 700 ಎಕರೆ ಭೂಮಿ ಭೂ ಒತ್ತುವರಿಯಾಗಿದೆ ಎಂದು ಅಕಾರಿಗಳು ಪತ್ತೆಹಚ್ಚಿದ್ದಾರೆ. ಸುಪ್ರೀಂ ಮತ್ತು ಹೈಕೋರ್ಟ್ನ ಮಾರ್ಗಸೂಚಿ ಅನ್ವಯ ಒತ್ತುವರಿ ತೆರವು ಪ್ರಕ್ರಿಯೆ ನಿರಂತರವಾಗುತ್ತದೆ. ಪ್ರತಿ 15 ದಿನಕ್ಕೊಮ್ಮೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡುತ್ತಿರುತ್ತದೆ. ನಿಷ್ಕ್ರಿಯೆಗೊಂಡ ಕೆರೆಗಳನ್ನು ವಸತಿ ಪ್ರದೇಶಗಳನ್ನಾಗಿ ಪರಿವರ್ತಿಸಲು ಕಂದಾಯ ಇಲಾಖೆಯಲ್ಲಿ ಅವಕಾಶವಿದೆ. ಆದರೆ ಬಿಡಿಎ ಕೆರೆ ಅಂಗಳದಲ್ಲಿ ನಿರ್ಮಿಸಿದ 16 ಲೇಔಟ್ಗಳಲ್ಲಿ ಕಾನೂನನ್ನು ಪಾಲಿಸಿಲ್ಲ. ಹಾಗಾಗಿ ಇಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಆತಂಕ ಎದುರಾಗಿದೆ ಎಂದರು.
ಶಿರಾ ತಾಲೂಕಿನ ದೇವಾಲಯಗಳಲ್ಲಿ ದಲಿತರ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಸ್ಪೃಶ್ಯತೆ ಆಚರಣೆಯನ್ನು ಸಂವಿಧಾನಬದ್ಧವಾಗಿ ನಿಷೇಸಲಾಗಿದೆ. ಹಿಂದೂ ಧರ್ಮದಲ್ಲಿ ಈ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಮಠಾಶರು ಮುಂದಾಗಬೇಕು ಎಂದು ಹೇಳಿದರು. ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಆಡಳಿತಾಕಾರಿ ನೇಮಕಗೊಂಡ ಮೇಲೆ ಸೇವಾ ಕಾರ್ಯಗಳು ಸ್ಥಗಿತಗೊಂಡಿಲ್ಲ. ಟ್ರಸ್ಟ್ಗಳ ವಿವಾದ ಹಿನ್ನೆಲೆಯಲ್ಲಿ ಭಕ್ತರ ಕಾಣಿಕೆ ಹಣವನ್ನು ಜಿಲ್ಲಾಡಳಿತ ತಾತ್ಕಾಲಿಕವಾಗಿ ತನ್ನ ವಶಕ್ಕೆ ಪಡೆದಿದೆ. ವಿವಾದ ಬಗೆಹರಿದ ಕೂಡಲೇ ದೇವಾಲಯದ ನಿರ್ವಹಣೆ ಸರ್ಕಾರದ ಅನದಲ್ಲೇ ಇರುತ್ತದೆ ಎಂದು ತಿಳಿಸಿದರು.