ಕನ್ನಡದ ಪ್ರತಿಭಾವಂತ ನಟ ಯಶ್ ಅವರ ಬಹು ನಿರೀಕ್ಷೆಯ ಚಿತ್ರದಲ್ಲಿ ನಟಿಸಲು ತೆಲುಗು, ತಮಿಳು ಚಿತ್ರರಂಗದ ಹಾಟ್ ನಟಿ ಸಮಂತಾ ನಿರಾಕರಿಸಿದ್ದಾಳೆ ಎಂಬ ಮಾಹಿತಿ ಲಭಿಸಿದೆ.
ಸಮಂತಾ ಯಶ್ ಅವರ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಾರೆ ಬರಲಿದ್ದಾರೆ ಎನ್ನಲಾಗುತ್ತಿತ್ತು. ಅಲ್ಲದೇ ಇದಕ್ಕಾಗಿ 80 ಲಕ್ಷ ರೂಪಾಯಿ ಸಂಭಾವನೆ ಕೇಳಿದ್ದಾರೆ ಎಂಬ ಮಾತೂ ಕೇಳಿ ಬಂದಿತ್ತು.
ಆದರೆ ಇದೀಗ ಬಂದ ಸುದ್ದಿಯ ಪ್ರಕಾರ ಕನ್ನಡದಲ್ಲಿ ತಾನು ನಟಿಸಲಿರುವ ಬಗ್ಗೆಯೇ ಸ್ವತಃ ಸಮಂತಾಗೆ ಗೊತ್ತಿಲ್ಲ ಎನ್ನಲಾಗಿದ್ದು ಇದು ಗಾಳಿ ಸುದ್ದಿ. ಸಮಂತಾ ತೆಲಗು ಮತ್ತು ತಮಿಳಿನಲ್ಲಿ ಬ್ಯೂಸಿ ಇದ್ದು ಕನ್ನಡದ ಯಾವ ಚಿತ್ರಗಳನ್ನು ಸದ್ಯಕ್ಕೆ ಮಾಡುವುದಿಲ್ಲ ಎಂದು ಸಮಂತಾರ ವಕ್ತಾರರು ತಿಳಿಸಿದ್ದಾರೆ.
ಜುಲೈನಲ್ಲಿ ಸೆಟ್ಟೇರಲಿರುವ ಇನ್ನೂ ಹೆಸರಿಡದ ಈ ಚಿತ್ರ, ತಮಿಳಿನ `ವಾಲು’ ಚಿತ್ರದ ಕಥೆಯ ಒಂದು ಎಳೆಯನ್ನು ಹೊಂದಿರುತ್ತದೆ ಎನ್ನಲಾಗಿದ್ದು ಸದ್ಯ ಮಾಸ್ಟರ್ ಪೀಸ್ ಚಿತ್ರದಲ್ಲಿ ಬ್ಯುಸಿಯಾಗಿರುವ ಯಶ್, ಅದಾದ ನಂತರ ಮಹೇಶ್ ರಾವ್ ಆ್ಯಕ್ಷನ್ಕಟ್ನಲ್ಲಿ ಸಮಂತಾ ಜೊತೆ ನಟಿಸಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದ್ದು ಕಳೆದ ವಾರ ನಿರ್ಮಾಪಕ ಕೆ ಮಂಜು ತಮ್ಮ ಚಿತ್ರದಲ್ಲಿ ಸಮಂತಾರನ್ನು ಕರೆ ತರಲು ಮುಂದಾಗುತ್ತಿದ್ದಾರೆ. ಯಶ್ಗೆ ನಾಯಕಿಯಾಗಿ ಸಮಂತಾ ಅಭಿನಯಿಸಲಿದ್ದಾರೆ ಎಂದು ಸುದ್ದಿಯಾಗಿತ್ತು ಎಂಬುದನ್ನಿಲ್ಲಿ ಸ್ಮರಿಸಬಹುದು.