ಇತ್ತೀಚೆಗೆ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್ ಸಿನಿಮಾಗಳು ರೀ-ರಿಲೀಸ್ ಆಗಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಇದೀಗ ಮಂಡ್ಯದ ಗಂಡು ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ‘ಅಂತ’ ಚಿತ್ರ ಅಧುನಿಕ ತಂತ್ರಜ್ಞಾನದಲ್ಲಿ ಮತ್ತೊಮ್ಮೆ ಬಿಗ್‍ಸ್ಕ್ರೀನ್‍ಗೆ ಬರುತ್ತಿದ್ದು ಸಿನಿಮಾ ಪ್ರಿಯರಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಅಂಬರೀಶ್ ಅವರು ಮೇ 29ಕ್ಕೆ 63 ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರೀ ರಿಲೀಸ್ ಗೆ ಚಿತ್ರತಂಡ ಮುಂದಾಗಿದ್ದು ಹೀಗಾಗಿ ಲಹರಿ ಸಂಸ್ಥೆಯಲ್ಲಿ ಅಂತ ಸಿನಿಮಾದ ಡಿಜಿಟಲ್ ಕಾರ್ಯ ನಡೆಯುತ್ತಿದ್ದು, 5.1 ಡಿಜಿಟಲ್ ಸೌಂಡ್‍ನೊಂದಿಗೆ ಅಂಬಿ ಹುಟ್ಟುಹಬ್ಬಕ್ಕೆ ತೆರೆಗೆ ಬರಲಿದೆ.
ಕನ್ನಡ ಸಿನಿಮಾ ಇತಿಹಾಸದಲ್ಲಿ ‘ಅಂತ’ ಸಿನಿಮಾ ಹೊಸ ದಾಖಲೆ ನಿರ್ಮಿಸಿದ್ದ ‘ಅಂತ’ ಅಂಬರೀಶ್ ಅವರಿಗೆ ಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ತಂದಿತ್ತು. ಹಾಗಾಗಿ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರ ಈ ಸಿನಿಮಾ ಅಂಬರೀಶ್ ಅವರ 63ನೇ ಹುಟ್ಟುಹಬ್ಬಕ್ಕೆ ಕರ್ನಾಟಕದ 63 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂಬ ಮಾಹಿತಿ ಲಭಿಸಿದೆ.