ರಾಷ್ಟ್ರೀಯ

ಪೆಟ್ರೋಲ್ ದರ 3.13 ರು, ಡೀಸೆಲ್ 2.71 ರು ಏರಿಕೆ: ಸತತ ಎರಡನೇ ಬಾರಿಗೆ ದರ ಹೆಚ್ಚಳ, ಮಧ್ಯರಾತ್ರಿಯಿಂದಲೇ ನೂತನ ದರ ಜಾರಿ

Pinterest LinkedIn Tumblr

petrol-price-hiked

ನವದೆಹಲಿ: ತಿಂಗಳ ಹಿಂದಷ್ಟೇ ದರ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ನಲ್ಲಿ ಶುಕ್ರವಾರ ಮತ್ತೆ ಭಾರಿ ಪ್ರಮಾಣದಲ್ಲಿ ದರ ಏರಿಕೆಯಾಗಿದೆ.

ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.31 ರು ಮತ್ತು ಪ್ರತೀ ಲೀಟರ್ ಡೀಸೆಲ್ ದರದಲ್ಲಿ 2.71 ರು ಹೆಚ್ಚಳವಾಗಿದೆ. ನೂತನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದರದಲ್ಲಿ ಹೆಚ್ಚಳವಾದ ಕಾರಣ ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ದರ ಏರಿಕೆ ಅನಿವಾರ್ಯ ಎಂದು ಈ ಹಿಂದೆ ತೈಲ ಕಂಪನಿಗಳು ಹೇಳಿದ್ದವು. ಅದರ ಅನ್ವಯ ಕೇವಲ 15 ದಿನಗಳಲ್ಲಿಯೇ ಎರಡನೇ ಬಾರಿಗೆ ಇಂಧನ ದರದಲ್ಲಿ ಏರಿಕೆ ಕಂಡುಬಂದಿದೆ.

ಕಳೆದ ಏಪ್ರಿಲ್ 30ರಂದು ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.96 ರುಪಾಯಿ ಮತ್ತು ಡೀಸೆಲ್ ದರದಲ್ಲಿ 2.37 ರು.ಗಳಷ್ಟು ಏರಿಕೆಯಾಗಿತ್ತು. ಇಂಧನ ದರದ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಂಡ ಬಳಿಕ ಪೆಟ್ರೋಲ್ ದರದಲ್ಲಿ ಸಾಕಷ್ಟು ಇಳಿಕೆಯಾಗಿತ್ತು. ಇದೀಗ ಮತ್ತೆ ಇಂಧನ ಬೆಲೆ ಗಗನದತ್ತ ಮುಖ ಮಾಡಿದೆ.

Write A Comment