ಮಂಗಳೂರು, ಮೇ. 21: ಕಸ್ಟಮ್ಸ್ ಅಧಿಕಾರಿಗಳು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಬ್ಬರನ್ನು ಬಂಧಿಸಿ ಅವರಿಂದ 6,600 ಬ್ರಿಟಿಷ್ ಪೌಂಡ್ (6,49,440 ರೂ.) ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಅಧಿಕಾರಿಗಳು ಕಾಸರಗೋಡಿನ ಪಳ್ಳಿಕೆರೆ ನಿವಾಸಿಗಳಾದ ಮುಹಮ್ಮದ್ ಸ್ವಾಲಿಹ್ (36) ಮತ್ತು ಮುಹಮ್ಮದ್ ಅಶ್ರ್ ಅಬ್ದುಲ್ಲಾ (35) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳು ಇಂದು ಬೆಳಗ್ಗೆಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಮಂಗಳೂರಿನಿಂದ ದುಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಕಸ್ಟಮ್ಸ್ ಅಕಾರಿಗಳು ತಪಾಸಣೆ ನಡೆಸಿದಾಗ 6,600 ಬ್ರಿಟಿಷ್ ಪೌಂಡ್ ಪತ್ತೆಯಾಗಿದೆ.
ವಿದೇಶಿ ಕರೆನ್ಸಿಗೆ ಸಂಬಂಧಿಸಿ ಯಾವುದೇ ದಾಖಲೆ ಪತ್ರಗಳು ಆರೋಪಿಗಳ ಬಳಿ ಇಲ್ಲದಿದ್ದುದರಿಂದ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.