ಮಂಗಳೂರು,ಮೇ.21 : ಹಿಂದೂ ಮುಖಂಡ, ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲಾಧ್ಯಕ್ಷ ಜಗದೀಶ ಶೇಣವ ಅವರನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅಶ್ಲೀಲವಾಗಿ ಚಿತ್ರಿಸಿ ತೇಜೋವಧೆ ಮಾಡಲಾಗಿದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ಬುಕ್ನಲ್ಲಿ ಓರ್ವ ಯುವಕ ಹಾಗೂ ಯುವತಿ ಅಶ್ಲೀಲ ಭಂಗಿಯಲ್ಲಿರುವ ಫೋಟೊಗಳನ್ನು ಹಾಕಿ ಅದರಲ್ಲಿ `ಜಗದೀಶ ಶೇಣವ ಆರ್ಎಸ್ಎಸ್ ಕಾರ್ಯಕರ್ತ’ ಎಂದು ಬರೆಯಲಾಗಿದೆ. ಈ ಫೋಟೊ ಅಂತರ್ಜಾಲ, ಮೊಬೈಲ್ ಫೋನಿನಲ್ಲೂ ಹರಿದಾಡುತ್ತಿದೆ.
ಈ ಕುರಿತು ಶೇಣವ ಸ್ನೇಹಿತರು ಅವರಿಗೆ ದೂರವಾಣಿ ಕರೆ ಮಾಡಿ ವಾಟ್ಸ್ಆ್ಯಪ್ನಲ್ಲಿ ಅಶ್ಲೀಲ ಫೋಟೊ ಕಳುಹಿಸಿ ವಿಷಯ ತಿಳಿಸಿದ್ದಾರೆ.
ಶೇಣವ ಈ ಕುರಿತು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿ, ಯಾರೋ ಕಿಡಿಗೇಡಿಗಳು ಫೇಸ್ಬುಕ್ನಲ್ಲಿ ಅಶ್ಲೀಲ ಭಂಗಿಯಲ್ಲಿರುವ ಫೋಟೊಗಳನ್ನು ಹಾಕಿ ತೇಜೋವಧೆ ಮಾಡಿದ್ದಾರೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.