ಫೋಟೋ: ಅಶೋಕ್ ಬೆಳ್ಮಣ್
ದುಬೈ, ಮೇ 22: ದುಬೈಯ ಹೊಟೇಲ್ ಉದ್ಯಮಿ ಪ್ರವೀಣ್ ಶೆಟ್ಟಿಯವರ ತಂದೆ-ತಾಯಿಯ ದಾಂಪತ್ಯ ಜೀವನವು 50ನೆ ವರ್ಷಕ್ಕೆ ಕಾಲಿಟ್ಟ ಶುಭ ಸಂದರ್ಭದ ಹಿನ್ನೆಲೆಯಲ್ಲಿ ಯುಎಇಯಲ್ಲಿರುವ ಅವರ ಮಾಲಕತ್ವದ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಆಡಳಿತ ಸಿಬ್ಬಂದಿ ವರ್ಗದವರು ಶುಕ್ರವಾರ ಬೆಳಗ್ಗೆ ದುಬೈಯ ಲತೀಫ ಆಸ್ಪತ್ರೆಯಲ್ಲಿ ಉಚಿತ ರಕ್ತದಾನ ಮಾಡುವ ಮೂಲಕ ತಮ್ಮ ಸೇವಾ ಮನೋಭಾವವನ್ನು ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 8ರಿಂದ 9.30ಯ ವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 25ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.