ವಾಷಿಂಗ್ ಟನ್ : ಗೂಗಲ್ ಮ್ಯಾಪ್ ನಲ್ಲಿ ಇನ್ನು ಮುಂದೆ ವಾಹನ ದಟ್ಟಣೆ ಬಗ್ಗೆ ಮಾಹಿತಿ ದೊರೆಯಲಿದೆ.
ಕೇವಲ ಉದ್ದೇಶಿತ ಸ್ಥಳಗಳನ್ನು ತಲುಪುದಕ್ಕಾಗಿ ಬಳಸಲಾಗುತ್ತಿದ್ದ ಗೂಗಲ್ ಮ್ಯಾಪ್ ನಿಂದ ವಾಹನ ಸವಾರರು ಮುಂದಿನ ದಿನಗಳಲ್ಲಿ ತಾವು ತಲುಪಬೇಕಿರುವ ಮಾರ್ಗದ ಯಾವ ಭಾಗಗಳಲ್ಲಿ ವಾಹನ ದಟ್ಟಣೆ ಇದೆ ಹಾಗೂ ಅದಕ್ಕೆ ಉತ್ತಮವಾದ ಪರ್ಯಾಯ ಮಾರ್ಗ ಯಾವುದು ಎಂಬ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ಅಂತೆಯೇ ವಾಹನ ದಟ್ಟಣೆ ಇನ್ನೂ ಎಷ್ಟು ಸಮಯ ಹಾಗೆಯೇ ಇರಲಿದೆ ಎಂಬ ಬಗ್ಗೆಯೂ ಗೂಗಲ್ ಮ್ಯಾಪ್ ಸಂಪೂರ್ಣ ವಿವರಣೆ ನೀಡಲಿದೆ.
ಕಳೆದ ವರ್ಷದ ವಾಹನ ದಟ್ಟಣೆಯ ಬಗ್ಗೆಯೂ ಗೂಗಲ್ ಮ್ಯಾಪ್ ಮಾಹಿತಿಯನ್ನು ಬಳಸಿಕೊಂಡು ವಾಹನ ದಟ್ಟಣೆ ಇಲ್ಲದ ಪರ್ಯಾಯ ಮಾರ್ಗದ ಬಗ್ಗೆ ವಾಹನ ಸವಾರರಿಗೆ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.