ರಾಷ್ಟ್ರೀಯ

ಮೊಬೈಲ್‌ ಬಳಕೆ: ಹಿಂದೆ ಬಿದ್ದ ಹಿರಿಯರು

Pinterest LinkedIn Tumblr

mobile

ಹೊಸದಿಲ್ಲಿ: ದೇಶದ ಮೊಬೈಲ್‌ ಚಂದಾದಾರರ ಸಂಖ್ಯೆ 96 ಕೋಟಿ ಮೀರಿದ್ದರೂ, 50 ವರ್ಷ ದಾಟಿದ ಮೊಬೈಲ್‌ ಬಳಕೆದಾರರ ಸಂಖ್ಯೆ ಮಾತ್ರ ಶೇ.6 ಎಂದು ಹೊಸ ಸಮೀಕ್ಷೆ ತಿಳಿಸಿದೆ.

ಹಿರಿಯ ನಾಗರಿಕರು ಮೊಬೈಲ್‌ ಇಂಟರ್ನೆಟ್‌ನ ಸಂಪೂರ್ಣ ಪ್ರಯೋಜನ ಪಡೆಯುತ್ತಿಲ್ಲ ಎಂಬುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.

‘ದೇಶದ ಒಟ್ಟು ಮೊಬೈಲ್‌ ಬಳಕೆದಾರರ ಪೈಕಿ , ಶೇ. 6 ಮಂದಿ ಮಾತ್ರ 50 ವರ್ಷ ದಾಟಿದವರು. ಅದರಲ್ಲೂ ಶೇ.1 ರಷ್ಟು ಹಿರಿಯರು ಮಾತ್ರ ಮೊಬೈಲ್‌ ಡೇಟಾ ಬಳಸುವರು,’ ಎಂದು ನಾರ್ವೆ ಮೂಲದ ಟೆಲಿಕಾಂ ದಿಗ್ಗಜ ಟೆಲಿನಾರ್‌ ಸಮೀಕ್ಷೆ ತಿಳಿಸಿದೆ.

ಭಾರತ, ಥಾಯ್ಲೆಂಡ್‌, ಬಾಂಗ್ಲಾದೇಶ ಹಾಗೂ ಮಲೇಷ್ಯಾದಲ್ಲಿ ನಡೆಸಿದ ಸಮೀಕ್ಷೆ ವರದಿಯನ್ನು ಟೆಲಿನಾರ್‌ ಬಿಡುಗಡೆ ಮಾಡಿದೆ. ‘ಎಲ್ಲರಿಗೂ ಇಂಟರ್ನೆಟ್‌ ಎಂಬ ನಮ್ಮ ಪರಿಕಲ್ಪನೆ ಏಷ್ಯಾದಲ್ಲಿ ಸಾಕಾರಗೊಂಡಿಲ್ಲ. ಹಿರಿಯ ನಾಗರಿಕರು ಮೊಬೈಲ್ ಇಂಟರ್ನೆಟ್‌ನ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ,’ ಎಂದು ಟೆಲಿನಾರ್‌ ಸಮೂಹದ ಉಪಾಧ್ಯಕ್ಷ ಸಿಗ್ವೆ ಬ್ರಕ್‌ ತಿಳಿಸಿದ್ದಾರೆ.

Write A Comment