ಜೋಹಾನ್ಸ್ಬರ್ಗ್, ಮೇ 28- ವಿಶ್ವಕಪ್ ಹಾಗು ಐಪಿಎಲ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಡೇಲ್ಸ್ಟೇನ್ಗೆ ಮುಂಬರುವ ಬಾಂಗ್ಲಾ ಪ್ರವಾಸದ ವೇಳೆ ಟೆಸ್ಟ್ನಲ್ಲಿ ಸ್ಥಾನ ದೊರೆತರೂ ಏಕದಿನ ಹಾಗೂ ಟ್ವೆಂಟಿ-20 ಸರಣಿಗಳಿಂದ ಕೈಬಿಡಲಾಗಿದೆ.
ಮುಂಬರುವ ಟ್ವೆಂಟಿ-20 ವಿಶ್ವಕಪ್ನ್ನು ದೃಷ್ಟಿಯಲ್ಲಿಟ್ಟುಕೊಂಡು ಯುವ ಪ್ರತಿಭೆಗಳಿಗೆ ಹೆಚ್ಚು ಮಣೆ ಹಾಕಲಾಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಡೇನ್ವೈಲ್ಸ್ , ರಿಜಾ ಎನ್ಡ್ರಿಕ್ಸ್ , ಅರೋನ್ ಫಾನ್ಗಿಸೋ , ಕಾಗಿಸೋ ರಾಬಾದಾರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ದಕ್ಷಿಣ ಆಫ್ರಿಕಾ ಈ ಸರಣಿಯಲ್ಲಿ ಬಾಂಗ್ಲಾ ವಿರುದ್ಧ 2 ಟ್ವೆಂಟಿ-20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ.
ಡಿವಿಲಿಯರ್ಸ್ಗೆ ವಿಶ್ರಾಂತಿ:
ತಂದೆಯ ಆಗುವ ಸಂತಸದಲ್ಲಿರುವ ತಂಡದ ಶ್ರೇಷ್ಠ ಆಟಗಾರ ಡಿವಿಲಿಯರ್ಸ್ ಗೆ ಟೆಸ್ಟ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಏಕದಿನ ಹಾಗೂ ಟ್ವೆಂಟಿ-20 ಸರಣಿಯ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ತಂಡಗಳ ವಿವರ: ಟೆಸ್ಟ್
ಆಶೀಮ್ ಆಮ್ಲ (ನಾಯಕ), ಡೇನ್ ಎಲ್ಗರ್ , ರಿಜಾ ಎಂಡ್ರಿಕ್ಸ್ , ಫ್ಲಾಫ್ ಡು ಪ್ಲೆಸಸ್ , ಸ್ಟೀನ್ ವಾನ್ ಜೋಲ್, ಜೆ.ಪಿ.ಡುಮಿನಿ, ಡಿ ಕಾಕ್ , ಫಿಲೆಂಡರ್ , ಡೇಲ್ ಸ್ಟೇನ್, ಮಾರ್ನೆ ಮಾರ್ಕಲ್ , ಆರೋನ್ ಪಿನ್ಗಿಸೋ , ಸಿಮೋನ್ ಆರ್ಮೀರ್, ಟಿಮ್ಬಾ ಬಾಯುಮಾ , ಕಗಿಸೊ ರಾಬಾಡಾ, ಡೇನ್ ವಿಲ್ಲಸ್.
ಏಕದಿನ ತಂಡ:
ಎಬಿಡಿವಿಲಿಯರ್ಸ್ (ನಾಯಕ), ಆಶೀಮ್ ಆಮ್ಲಾ (ಉಪನಾಯಕ), ಡಿ ಕಾಕ್ , ಫ್ಲಾಪ್ ಡ್ಲು ಪ್ಲೆಸಸ್ , ರಿಲೆ ರೊಸ್ಸೋ , ಜೆ.ಪಿ.ಡುಮಿನಿ, ಡೇವಿಡ್ ಮಿಲ್ಲರ್ , ಫಾರ್ನಿ ಬೆಹರ್ದಿನ್ , ಕ್ರಿಸ್ ಮೊರಿಸ್ , ಮಾರ್ನೆ ಮೊರ್ಕಲ್ , ಇಮ್ರಾನ್ ತಹೀರ್, ಕಾಗಿಸೋ ರಾಬಾಡಾ, ಕ್ಲೇನ್ ಅಬೋಟ್ , ಅರೋನ್ ಪಿನ್ಗಿಸೋ, ವಾನೆ ಪರ್ನಾಲ್, ರಾಯನ್ ಮೆಕ್ರೆನ್
ಟ್ವೆಂಟಿ-20 ತಂಡ:
ಪ್ಲಾಫ್ ಡು ಪ್ಲೆಸಸ್ (ನಾಯಕ), ಡಿ ಕಾಕ್ , ರಿಲೆ ರೊಸ್ಸೋ, ಎಬಿಡಿವಿಲಿಯರ್ಸ್ , ಜೆ.ಪಿ.ಡುಮಿನಿ, ಡೇವಿಡ್ ಮಿಲ್ಲರ್, ಡೇವಿಡ್ ವೈಸ್ , ಕ್ರಿಸ್ ಮೋರಿಸ್, ಕ್ಲೇನ್ ಅಬೋಟ್, ಕಾಗಿಸೋ ರಾಬಾಡಾ, ಅರೋನ್ ಪಿನ್ಗಿಸೋ, ಎಡ್ಡಿ ಲಿಲ್ಲೆ , ವಾನೆ ಪರ್ನಾಲ್ , ಬ್ಯೂರಿನ್ ಎನ್ಡ್ರಿಕ್ಸ್ .
ಪಂದ್ಯಗಳ ವಿವರ:
ಮೊದಲ ಟ್ವೆಂಟಿ-20: ಜುಲೈ 5 , 2ನೆ ಪಂದ್ಯ: ಜುಲೈ 7
ಮೊದಲ ಏಕದಿನ: ಜುಲೈ 10, 2ನೆ ಪಂದ್ಯ: ಜುಲೈ 12, 3ನೆ ಪಂದ್ಯ: ಜುಲೈ 15 ಮೊದಲ ಟೆಸ್ಟ್ : ಜುಲೈ 21-25 , 2ನೆ ಪಂದ್ಯ: ಜುಲೈ 30-ಆಗಸ್ಟ್ 3.