ಅಂತರಾಷ್ಟ್ರೀಯ

ಮಲೇಷಿಯಾದ ದ್ವೀಪ ರಾಜ್ಯ ಬೋರ್ನಿಯೋದಲ್ಲಿ ಭೂಕಂಪ

Pinterest LinkedIn Tumblr

Earthquake-malasia

ಕೌಲಾಲಂಪುರ್, ಜೂ.5: ಮಲೇಷಿಯಾದ ದ್ವೀಪ ರಾಜ್ಯ ಬೋರ್ನಿಯೋದಲ್ಲಿ ಇಂದು ಮಂಜಾನೆ 6.0 ಪರಿಮಾಣದಲ್ಲಿ ಭೂಮಿ ಕಂಪಿಸಿದ್ದು, ಸದ್ಯ ಯಾವುದೇ ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ, ಸುನಾಮಿ ಆತಂಕವನ್ನು ಅಮೆರಿಕಾ ಭೂಗರ್ಭ ತಜ್ಞರು ಹೇಳಿದ್ದಾರೆ.

ಈ 6.0 ತೀವ್ರತೆಯ ಭೂಕಂಪದ ಕೇಂದ್ರಬಿಂದು ರಾನೌಪಟ್ಟಣದಿಂದ 19 ಕಿ.ಮೀ. ದೂರ ಮತ್ತು ಕೊಟಕಿನಾಬಲುದಿಂದ 54 ಕಿ.ಮೀ. ಅಂತರದಲ್ಲಿ ಭೂಗರ್ಭದ 10 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಮೂಲಗಳ ಪ್ರಕಾರ, ಕೆಲವು ಕಟ್ಟಡಗಳು ಉರುಳಿಬಿದ್ದಿದ್ದು, ರಸ್ತೆಗಳು ಬಿರುಕು ಬಿಟ್ಟಿವೆ ಎಂದು ಹೇಳಲಾಗಿದೆ.

Write A Comment