ಶಿವಮೊಗ್ಗ: ತೀರ್ಥಹಳ್ಳಿ ಬಾಲಕಿ ನಂದಿತ ಸಾವಿನ ಪ್ರಕರಣ ನಂತರ ನಡೆದ ಗಲಭೆ ಸಂಬಂಧ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ 47 ಮಂದಿ ವಿರುದ್ಧ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. 2014 ರಲ್ಲಿ ನಂದಿತಾ ತಮ್ಮ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಹೀಗಾಗಿ ಇಡೀ ತೀರ್ಥಹಳ್ಳಿ ಹೊತ್ತಿ ಉರಿದಿತ್ತು.
8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಂದಿತಾ 2014 ಅಕ್ಟೋಬರ್ 29 ರಂದು ಆನಂದಗಿರಿ ಬೆಟ್ಟದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ನಂತರ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 31 ರಂದು ನಂದಿತಾ ಸಾವನ್ನಪ್ಪಿದ್ದಳು. ನಂತರ ತೀರ್ಥಹಳ್ಳಿಯಲ್ಲಿ ದೊಡ್ಡ ಗಲಭೆಯೇ ನಡೆದಿತ್ತು. ಹೀಗಾಗಿ ಸುಮಾರು 15 ದಿನಗಳ ಕಾಲ ನಿಷೇದಾಜ್ಞೆ ಜಾರಿ ಮಾಡಲಾಗಿತ್ತು.
ಗಲಭೆ ಪ್ರಕರಣ ಸಂಬಂಧ ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ 47 ಜನರ ವಿರುದ್ಧ 47 ಮಂದಿ ವಿರುದ್ಧ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.ಶಾಂತಿ ಭಂಗ, ಸಾರ್ವಜನಿಕ ಆಸ್ತಿ ನಷ್ಟ, ಪೊಲೀಸ್ ವಾಹನ ಜಖಂ ಹಾಗೂ 144 ಸೆಕ್ಷನ್ ಉಲ್ಲಂಘನೆ ಆರೋಪಗಳ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಈ ಗಲಭೆಯ ನಂತರ ಸರ್ಕಾರ ನಂದಿತಾ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ವಿಚಾರಣೆ ನಡೆಸಿದ ಸಿಐಡಿ ಪೊಲೀಸರು ನಂದಿತಾ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿ ನೀಡಿದ್ದರು.