ಇಷ್ಟು ದಿನ ಪುರುಷರು ಮಾತ್ರ ಉಪಯೋಗಿಸುತ್ತಿದ್ದ ವಯಾಗ್ರಕ್ಕೆ ಪ್ರತಿಯಾಗಿ ಅಮೆರಿಕಾ ಆಹಾರ ಮತ್ತು ಡ್ರಗ್ ನಿರ್ವಹಣಾ ಸಮಿತಿ ಇದೀಗ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯನ್ನು ಉದ್ರೇಕಿಸುವ ಮೊದಲ ಔಷಧಾ ತಯಾರಿಕೆಗೆ ಮುಂದಾಗಿದ್ದು ಸದ್ಯದಲ್ಲಿಯೇ ಈ ‘ವಯಾಗ್ರ’ ಮಹಿಳೆಯರಿಗೆ ಲಭಿಸಲಿದೆ.
ಪುರುಷರಲ್ಲಿ ಉದ್ರೇಕ ದೌರ್ಬಲ್ಯಕ್ಕೆ ಬಳಸುವ ವಯಾಗ್ರದ ಸ್ವರೂಪದಲ್ಲಿಯೇ ಈ ‘ಫ್ಲಿಬಾನ್ ಸೆರಿನ್’ ಎಂಬ ಔಷಧ ಇರಲಿದ್ದು ಈಗಾಗಲೇ ಸಲಹಾ ಸಮಿತಿ ಇದಕ್ಕೆ ಅಂಗೀಕಾರ ನೀಡಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ತಿಳಿಸಿದೆ.
ಲೈಂಗಿಕ ಆಸಕ್ತಿಯ ದೌರ್ಬಲ್ಯದಿಂದ ನರಳುತ್ತಿರುವ ಮಹಿಳೆಯರಿಗೆ ಮುಟ್ಟು ತೀರಿಕೆಗೂ ಪೂರ್ವದಲ್ಲಿ ಮಲಗುವ ವೇಳೆಯಲ್ಲೂ ದಿನಕ್ಕೊಮ್ಮೆ ತೆಗೆದುಕೊಳ್ಳಬಹುದಾದ ಈ ಕಂದು ಮಾತ್ರೆಯು ಲೈಂಗಿಕ ಉತ್ತೇಜನವನ್ನು ನೀಡಲಿದ್ದು ಇದನ್ನು ಮುಟ್ಟುತೀರಿಕೆಯ ಪೂರ್ವದಲ್ಲಿ ಲೈಂಗಿಕ ದೌರ್ಬಲ್ಯ ಕಂಡು ಬಂದಿರುವ ಮಹಿಳೆಯರು ಉಪಯೋಗಿಸಬಹುದಾಗಿದೆಯಂತೆ.
ಇದರ ಪ್ರಯೋಗದ ವೇಳೆ ಮಹಿಳೆಯರಿಗೆ ಈ ಮಾತ್ರೆ ಉಪಯೋಗವಾಗಿದ್ದರೂ ಕಡಿಮೆ ರಕ್ತದೊತ್ತಡ, ತಲೆಸುತ್ತುವುದು ಕಂಡುಬಂದಿದ್ದು ಈ ನಡುವೆ ಲೈಂಗಿಕ ಸಮಾನತೆಗೆ ಇದು ಒಳ್ಳೆಯ ನಡೆ ಎಂದು ಕೆಲವು ಮಹಿಳಾ ಸಂಘಟನೆಗಳು ಇದನ್ನು ಸ್ವಾಗತಿಸಿವೆ.