ಮುಂಬಯಿ : ನಗರದ ಪ್ರತಿಷ್ಟಿತ ಜಾತೀಯ ಸಂಸ್ಥೆ ಕುಲಾಲ ಸಂಘ ಮುಂಬಯಿ ಇದರ ಸಾಮಾಜಿಕ-ಆರ್ಥಿಕ ಸಮಿತಿಯ ಆಶ್ರಯದಲ್ಲಿ “ಕುಲಾಲ ನೃತ್ಯ ಪರ್ವ – 2” ಎಂಬ ಅಂತರಾಷ್ಟ್ರೀಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆಯು ಸೆಪ್ಟೆಂಬರ್ 13, 2015 ರಂದು ರವಿವಾರ ಮದ್ಯಾಹ್ನ 2.30 ರಿಂದ ಡಾ. ಎಮ್ ವಿಶ್ವೇಶ್ವರಯ್ಯ ಸಭಾಗೃಹ, ಕರ್ನಾಟಕ ಸಂಘ, ಮಾಟುಂಗ (ಪ), ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಗಿರೀಶ್ ಬಿ. ಸಾಲ್ಯಾನ್ ರ ಅಧ್ಯಕ್ಷತೆಯಲ್ಲಿ ಜರಗಲಿದೆ.
85 ವರ್ಷಗಳ ಭವ್ಯ ಇತಿಹಾಸವುಳ್ಳ ಈ ಸಂಘವು ಕುಲಾಲ ಪ್ರತಿಭೆಗಳನ್ನು ಒಂದು ವೇದಿಕೆಯಲ್ಲಿ ಒಗ್ಗೂಡಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇಶ ವಿದೇಶಗಳಿಂದ ಹಲವಾರು ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆಯೊಂದಿಗೆ ಉಪಾನ್ಯಾಸ, ಆಶೀರ್ವಚನ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ನೃತ್ಯ ಸ್ಪರ್ಧಾ ವರ್ಗಗಳು :
1. ಶಾಸ್ತ್ರೀಯ ಸಮೂಹ ನೃತ್ಯ (ವಯೋಮಿತಿ ಇಲ್ಲ),
2. ಜಾನಪದ ಸಮೂಹ ನೃತ್ಯ (ವಯೋಮಿತಿ: 14 ವರ್ಷದ ಒಳಗೆ),
3. ಜಾನಪದ ಸಮೂಹ ನೃತ್ಯ (ವಯೋಮಿತಿ: 14 ವರ್ಷ ಮತ್ತು ಮೇಲ್ಪಟ್ಟು),
4. ಪಾಶ್ಚಾತ್ಯ ಸಮೂಹ ನೃತ್ಯ (ವಯೋಮಿತಿ: 14 ವರ್ಷದ ಒಳಗೆ),
5. ಪಾಶ್ಚಾತ್ಯ ಸಮೂಹ ನೃತ್ಯ (ವಯೋಮಿತಿ: 14 ವರ್ಷ ಮತ್ತು ಮೇಲ್ಪಟ್ಟು).
ನಿಭಂದನೆಗಳು:
1. ಶಾಸ್ತ್ರೀಯ, ಜಾನಪದ ಮತ್ತು ಪಾಶ್ಚಾತ್ಯ ಗಳಲ್ಲಿ ಕೇವಲ ಸಮೂಹ ನೃತ್ಯ ಪ್ರದರ್ಶನಕ್ಕೆ
ಮಾತ್ರ ಅವಕಾಶವಿರುತ್ತದೆ,
2. ಪ್ರತಿ ತಂಡದಲ್ಲಿ 5 ರಿಂದ 12 ಸ್ಪರ್ಧಾಳುಗಳು ಇರತಕ್ಕದ್ದು,
3. ಪ್ರತಿ ನೃತ್ಯಕ್ಕೆ 5 ನಿಮಿಷಗಳ ಕಾಲಾವಧಿ ನೀಡಲಾಗುವುದು. ಈ ಅವಧಿಯನ್ನು
ಮೀರಿದರೆ, ಅಂಕಗಳಲ್ಲಿ ಕಡಿತ ಮಾಡಲಾಗುವುದು,
4. ಜಾನಪದ ಮತ್ತು ಪಾಶ್ಚಾತ್ಯ ನೃತ್ಯಗಳಲ್ಲಿ ಪ್ರಾಪ್ಸ್ ಅಗತ್ಯ,
5. ಸ್ಪರ್ಧಾಳುಗಳ ಜಾತಿ ದೃಡೀಕರಣ ಪತ್ರ ಲಗತ್ತಿಸಿರತಕ್ಕದ್ದು,
6. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕುಲಾಲ ಸಮಾಜ ಭಾಂದವರಿಗೆ ಮಾತ್ರ ಆಧ್ಯತೆ,
7. ಕುಲಾಲೇತರ ಸ್ಪರ್ಧಾಳುಗಳು ಭಾಗವಹಿಸಿದಲ್ಲಿ, ಆ ತಂಡವನ್ನು ಸ್ಪರ್ಧೆಯಿಂದ
ರದ್ದುಗೊಳಿಸಲಾಗುವುದು.
8. ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ಸ್ಥಳೀಯ ಸಮಿತಿಗಳ ತಂಡಗಳು ತಮ್ಮ ಹೆಸರನ್ನು
ಮುಂಬಯಿ, ಥಾಣೆ ಜಿಲ್ಲೆ , ನವಿಮುಂಬಯಿ ಸ್ಥಳೀಯ ಸಮಿತಿಗಳ ಪಧಾಧಿಕಾರಿಗಳ ಮುಖೇನ
ನೊಂದಾಹಿಸಬೇಕು.
9. ಮುಂಬಯಿಯಿಂದ ಹೊರಗಿನ ಭಾಗವಹಿಸಲಿಚ್ಚಿಸುವ ತಂಡಗಳು ಅರ್ಜಿಯನ್ನು ಸಂಘದ ಇ-ಮೇಲ್
kulalasanghamumbai@gmail.com ಗೆ ಕಳುಹಿಸಬಹುದು.
10. ಪ್ರತಿ ಸ್ಥಳೀಯ ಸಮಿತಿಗಳಿಂದ ಐದು ವರ್ಗಗಳಲ್ಲಿ ತಲಾ ಒಂದು ತಂಡದ ಹೆಸರು
ನೋಂದಾಯಿಸಬೇಕು. ಅವುಗಳೆಂದರೆ ಶಾಸ್ತ್ರೀಯ ಸಮೂಹ ನೃತ್ಯ (ವಯೋಮಿತಿ ಇಲ್ಲ), ಜಾನಪದ ಸಮೂಹ
ನೃತ್ಯ (ವಯೋಮಿತಿ: 14ವರ್ಷದ ಒಳಗೆ), ಜಾನಪದ ಸಮೂಹ ನೃತ್ಯ (ವಯೋಮಿತಿ: 14 ವರ್ಷ ಮತ್ತು
ಮೇಲ್ಪಟ್ಟು), ಪಾಶ್ಚಾತ್ಯ ಸಮೂಹ ನೃತ್ಯ (ವಯೋಮಿತಿ: ೧೪ ವರ್ಷದ ಒಳಗೆ) ಮತ್ತು ಪಾಶ್ಚಾತ್ಯ
ಸಮೂಹ ನೃತ್ಯ (ವಯೋಮಿತಿ: 14 ವರ್ಷ ಮತ್ತು ಮೇಲ್ಪಟ್ಟು).
11. ಒಂದು ಸಿಡಿಯಲ್ಲಿ ಒಂದು ಪದ್ಯವನ್ನು ಮಾತ್ರ ಅಳವಡಿಸಬೇಕು. ಮೂಲ ಸಿಡಿಯಲ್ಲಿ ಸಮಸ್ಯೆ
ಉಂಟಾದಲ್ಲಿ ಮುಂಜಾಗ್ರತೆಯಾಗಿ ಒಂದು ಹೆಚ್ಚುವರಿ ಸಿಡಿಯನ್ನು ಕೂಡಾ ತನ್ನಿರಿ.
12. ನೃತ್ಯಕ್ಕೆ ಭಾಷೆಯ ನಿರ್ಭಂದವಿರುವುದಿಲ್ಲ. ಯಾವುದೇ ಭಾರತೀಯ ಭಾಷೆಯಲ್ಲಿ ನೃತ್ಯ
ಪ್ರದರ್ಶನಕ್ಕೆ ಅವಕಾಶವಿರುತ್ತದೆ.
13. ಶಾಸ್ತ್ರೀಯ ನೃತ್ಯವು ಭರತನಾಟ್ಯಂ, ಮೊಹಿನಿಯಟ್ಟಮ್, ಮಣಿಪುರಿ, ಒಡಿಸ್ಸಿ,
ಕೂಚಿಪುಡಿ, ಕಥಕ್ಕಳಿ, ಕತಕ್ ಮುಂತಾದುವುಗಳನ್ನು ಒಳಗೊಂಡಿರಬಹುದು.
14. ಶಾಸ್ತ್ರೀಯ ನೃತ್ಯದಲ್ಲಿ ವೇಷಭೂಷಣ, ನೃತ್ಯ ಸಂಯೋಜನೆ, ಏಕಕಾಲಿಕ ಹೊಂದಾಣಿಕೆ,
ಹಾವಭಾವ ಮತ್ತು ತಾಳಕ್ಕೆ ಪ್ರಾಮುಖ್ಯತೆ ನೀಡಲಾಗುವುದು.
15. ಪಾಶ್ಚಾತ್ಯ ಮತ್ತು ಜಾನಪದ ನೃತ್ಯದಲ್ಲಿ ವೇಷಭೂಷಣ, ನೃತ್ಯ ಸಂಯೋಜನೆ, ಏಕಕಾಲಿಕ
ಹೊಂದಾಣಿಕೆ, ವೇದಿಕೆ ಬಳಸುವಿಕೆ ಮತ್ತು ಪ್ರಾಪ್ಸ್ ಗೆ ಪ್ರಾಮುಖ್ಯತೆ ನೀಡಲಾಗುವುದು.
16. ಪ್ರತಿ ವರ್ಗಗಳಲ್ಲಿ ವಿಜೇತ ತಂಡಗಳನ್ನು ಕ್ರಮವಾಗಿ ಪ್ರಥಮ ರೂ. 10,000/- ನಗದು,
ಟ್ರೋಫಿ, ಪ್ರಮಾಣಪತ್ರ, ದ್ವಿತೀಯ ರೂ. 6,000/- ನಗದು, ಟ್ರೋಫಿ,
ಪ್ರಮಾಣಪತ್ರ ಮತ್ತು ತೃತೀಯ ರೂ. 3,000/- ನಗದು, ಟ್ರೋಫಿ, ಪ್ರಮಾಣಪತ್ರಗಳೊಂದಿಗೆ
ಸತ್ಕರಿಸಲಾಗುವುದು.
17. ಪ್ರತಿ ವರ್ಗಗಳಲ್ಲಿ ತಲಾ ಒಂದರಂತೆ 5 ಉತ್ತಮ ನೃತ್ಯಗಾರ/ನೃತ್ಯಗಾರ್ತಿಯನ್ನು
ಟ್ರೋಫಿ ಮತ್ತು ವಿಶೇಷ ಪುರಸ್ಕಾರದಿಂದ ಪ್ರೋತ್ಸಾಹಿಸಲಾಗುವುದು.
18. ಈ ಸ್ಪರ್ಧೆಗೆ ಪ್ರವೇಶ ಶುಲ್ಕವಿರುವುದಿಲ್ಲ.
19. ಅರ್ಜಿ ಪತ್ರಗಳು ಸಂಘದ ಅಂತರ್ಜಾಲ ತಾಣ ಕುಲಾಲಸಂಘ ಡಾಟ್ ವೀಬ್ಲಿ ಡಾಟ್ ಕಾಮ್ (www.kulalasangha.weebly.com) ನಲ್ಲಿ ಲಭ್ಯವಿದೆ.
20. ಹೆಸರು ನೋಂದಾಯಿಸಲು ಕೊನೆಯ ದಿನಾಂಕ 30 ಅಗಸ್ಟ್ 2015
ಹೆಚ್ಚಿನ ವಿವರಗಳಿಗಾಗಿ ಸಾಮಾಜಿಕ-ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಎಂ ಬಂಗೇರ
(9820070136), *Churchgate – Dahisar:* Manoj Salian (9820070136), Jagadish
Moolya (9833836272), *Mira Road- Virar:* Roshan Bangera (9773261215),
Dhanpal Bangera (9029488785), *Navi Mumbai:* Suraj Kulal (9820557485),
Prasad Moolya (9833499984), *CST-Mulund-Mankhurd:* Dayanand Moolya
(9920831583), Suraj Karmaran (9820295036), *Thane-Kasara-Karjat & Bhiwandi:*
Bhavya Moolya (9920555365), Sangeeta Moolya (9769503930) ಇವರುಗಳನ್ನು
ಸಂಪರ್ಕಿಸಬಹುದು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಗೌ. ಪ್ರ. ಕಾರ್ಯದರ್ಶಿ ಡಿ. ಐ. ಮೂಲ್ಯ, ಗೌ. ಕೋಶಾಧಿಕಾರಿ ಜಯ ಎಸ್. ಅಂಚನ್ , ಸಾಮಾಜಿಕ-ಆರ್ಥಿಕ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್ ಎಂ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಮತಿ ಎಸ್. ಬಂಜನ್ ವಿನಂತಿಸಿದ್ದಾರೆ.