ಚಿಕ್ಕನಾಯಕನಹಳ್ಳಿ: ಮನೆಯ ಹಿತ್ತಲೇ ಜಗತ್ತು, ಪ್ಲಾಸ್ಟಿಕ್ ಹೊದಿಕೆಯ ಗೂಡೇ ಆಕೆಯ ಅರಮನೆ… ಸತತ 12 ವರ್ಷ ಪ್ರಾಣಿಗಳಿಗಿಂತ ನಿಕೃಷ್ಟ ಸ್ಥಿತಿಯಲ್ಲಿ ಬದುಕು ಸವೆಸಿದ ಯುವತಿ ಕೊನೆಗೂ ಬಂಧಮುಕ್ತರಾಗಿ ಹೊರಗಿನ ಜಗತ್ತು ಕಾಣುವಂತಾಯಿತು.
ಮಾನಸಿಕ ಅಸ್ವಸ್ಥೆ ಎಂಬ ಹಣೆ ಪಟ್ಟಿಯೊಂದಿಗೆ ಗೃಹಬಂಧನದಲ್ಲಿದ್ದ ತಾಲ್ಲೂಕಿನ ಕಂದಿಕೆರೆ ಹೋಬಳಿ ತಿಮ್ಮನ ಹಳ್ಳಿ ಗ್ರಾಮದ 29 ವರ್ಷದ ಲತಾಶ್ರೀ ಬಂಧ ಮುಕ್ತರಾದವರು.
ಮನೆಯವರು ಯುವತಿಯನ್ನು ಕೂಡಿ ಹಾಕಿದ್ದಾರೆ ಎಂಬ ಮಾಹಿತಿ ಆಧಾರದ ಮೇಲೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಮಂಗಳವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಬಂಧಮುಕ್ತಗೊಳಿಸಿದರು.
ಮನೆಯ ಹಿತ್ತಲಲ್ಲಿ ಲತಾಶ್ರೀ ವಾಸಿ ಸುತ್ತಿದ್ದ ಸ್ಥಳ ವೀಕ್ಷಣೆ ಮಾಡಿದರು. ಆಕೆಯ ಆರೋಗ್ಯ ವಿಚಾರಿಸಿ ನೋವು ಆಲಿಸಿದರು. ಕುಟುಂಬದವರ ಜತೆಗೂ ಮಾತುಕತೆ ನಡೆಸಿದರು. ಲತಾಶ್ರೀ ಅವ ರನ್ನು ಉತ್ತಮ ರೀತಿಯಲ್ಲಿ ನೋಡಿ ಕೊಳ್ಳಬೇಕು. ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಕುಟುಂಬ ವರ್ಗದವರಿಗೆ ಸೂಚಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಕೌನ್ಸೆಲಿಂಗ್ ಮಾಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಮಾತುಕತೆ: ‘ಆಕೆ ಆರೋಗ್ಯ ವಿಚಾರಿಸಿ ಚಿಕಿತ್ಸೆ ಕೊಡಿಸಲು ಸೂಚಿಸಲಾಗಿದೆ. ಮನೆಯೊಳಗೆ ಗಲೀಜು ಮಾಡುವುದು, ಕೆಲ ಬಾರಿ ಮಾನಸಿಕ ಸ್ಥಿತಿ ಸರಿ ಇರುತ್ತಿ ರಲಿಲ್ಲ ಎಂದು ಕುಟುಂಬ ವರ್ಗದವರು ಹೇಳಿದರು.
ಅವರೊಂದಿಗೆ ಮಾತುಕತೆ ನಡೆಸಿದಾಗ ಅಂಥದ್ದೇನು ಕಂಡು ಬರಲಿಲ್ಲ. ಆಗಾಗ ಪ್ರಜಾವಾಣಿ ತಂದು ಕೊಡುತ್ತಾರೆ. ಓದುತ್ತೇನೆ ಎಂದು ಹೇಳಿದರು. ದ್ವಿತೀಯ ಪಿಯು ಶಿಕ್ಷಣ ಪಡೆದ ಬಗ್ಗೆ ವಿವರಣೆ ನೀಡಿದರು’ ಎಂದು ಮಂಜುಳ ಮಾನಸ ತಿಳಿಸಿದರು. 2005ರಲ್ಲಿ ಒಂದು ಬಾರಿ ಚಿಕಿತ್ಸೆ ಕೊಡಿಸಿದ್ದು ಬಿಟ್ಟರೆ ಮತ್ತೆ ಚಿಕಿತ್ಸೆ ಕೊಡಿಸಿಲ್ಲ.
12 ವರ್ಷದಿಂದ ಬಂಧ ನದಲ್ಲಿ ಬದುಕಿದ್ದಾರೆ. ಆಕೆ ಆರೋಗ್ಯ ವಾಗಿಯೇ ಇದ್ದಾಳೆ. ಇನ್ನು ಮುಂದೆ ಮನೆಯೊಳಗೆ ಕರೆದುಕೊಂಡು ಚೆನ್ನಾಗಿ ನೋಡಿಕೊಳ್ಳಲು ಕುಟುಂಬದವರು ಒಪ್ಪಿದ್ದಾರೆ ಎಂದು ಹೇಳಿದರು.