ಮಂಗಳೂರು ಜೂನ್. 17: ಇದ್ದಕ್ಕಿದ್ದಂತೆ ತೀವ್ರ ಜ್ವರ,ಹಣೆಯ ಭಾಗದಲ್ಲಿ ನೋವು,ಕಣ್ಣು ಗುಡ್ಡೆಯಲ್ಲಿ ನೋವು,ಮಾಂಸ ಖಂಡಗಳಲ್ಲಿ ತೀವ್ರ ನೋವು ಇದ್ದಲ್ಲಿ ಡೆಂಗ್ಯೂ ಜ್ವರವೆಂದು ತಿಳಿಯಬಹುದಾಗಿದೆ. ಮೈಮೇಲೆ ಕೆಂಪು ಗಂಧೆಗಳು,ಕಣ್ಣು ಕೆಂಪಾಗುವುದು ವಸಡು ಮೂಗಿನಲ್ಲಿ ರಕ್ತ ಸ್ರಾವದ ಲಕ್ಷಣ ,ಕೆಂಪಾದ ಮೂತ್ರ ಮಲ ಕಪ್ಪಾಗಿದ್ದಲ್ಲಿ ತಕ್ಷಣ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಬೇಕು.
ಡೆಂಗ್ಯೂ ಜ್ವರ ಬಾರದಂತೆ ಡೆಂಗ್ಯೂ ಜ್ವರದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.ಮನೆ ಪರಿಸರದಲ್ಲಿ ಸ್ವಚ್ಛತೆ,ಘನತ್ಯಾಜ್ಯ ಸಮರ್ಪಕ ವಿಲೇವಾರಿ,ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಕೆ,ನೀರು ನಿಂತ ಸ್ಥಳಗಳಿಗೆ ವಾರದಲ್ಲಿ ಒಂದು ಸಲ ಟೆಮೋಫಾಸ್ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮ ಕೈಗೊಂಡಾಗ ಸೊಳ್ಳೆ ಬೆಳವಣಿಗೆ ನಿಯಂತ್ರಿಸಬಹುದಾಗಿದೆ.
ಸೊಳ್ಳೆ ನಿಯಂತ್ರಣಕ್ಕೆ ಓವರ್ ಹೆಡ್ ಟ್ಯಾಂಕ್,ಸಿಮೆಂಟ್ ಟ್ಯಾಂಕಿಗಳನ್ನು ಭದ್ರವಾಗಿ ಮುಚ್ಚಬೇಕು.ಮನೆಯ ಸುತಮುತ್ತ ಎಸೆದ ಪ್ಲಾಸ್ಟಿಕ್ ಟಯರ್ ತೆಂಗಿನಚಿಪ್ಪು,ಇತ್ಯಾದಿಗಳನ್ನು ತಕ್ಷಣ ವಿಲೇವಾರಿ ಮಾಡಬೇಕು.ಬಾವಿ/ಕೆರೆಗಳಲ್ಲಿ ಮೀನುಗಳನ್ನು ಸಾಕಬೇಕು.ಎರ್‌ಕೂಲರ್,ಹೂವಿನಕುಂಡ,ಮನಿಪ್ಲಾಂಟ್ ಇತ್ಯಾದಿಗಳ ನೀರನ್ನು ಪ್ರತೀ ವಾರ ಖಾಲಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.