ದೈನಂದಿನ ಕೆಲಸಗಳಿಗೆ ಸಂಬಂಧಿಸಿದಂತೆ ಅನೇಕ ಸಂಪ್ರದಾಯಗಳು ನಮ್ಮಲ್ಲಿ ಜಾರಿಯಲ್ಲಿವೆ. ಸ್ನಾನ ಮಾಡಿ ಪೂಜೆ ಮಾಡೋದು, ತಿಂಡಿಗಿಂತ ಮೊದಲೇ ಸ್ನಾನ ಮಾಡಬೇಕು. ಹೀಗೆ ಅನೇಕ ಪದ್ಧತಿಗಳು ಜಾರಿಯಲ್ಲಿವೆ. ಕೂದಲು ಕತ್ತರಿಸುವ ವಿಚಾರದಲ್ಲೂ ಕೆಲವೊಂದು ಸಂಪ್ರದಾಯಗಳಿವೆ.
ಮಂಗಳವಾರ, ಗುರುವಾರ ಮತ್ತು ಶನಿವಾರ ಕೂದಲನ್ನು ಕತ್ತರಿಸಬೇಡಿ ಅಂತಾ ದೊಡ್ಡವರು ಹೇಳ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವಿದೆ. ಶನಿವಾರ, ಗುರುವಾರ ಮತ್ತು ಮಂಗಳವಾರ ಗ್ರಹಗಳಿಂದ ಹಾನಿಕಾರಕ ಕಿರಣಗಳು ಬೀಳುತ್ತವೆ. ಅವು ನೇರವಾಗಿ ತಲೆಯ ಮೇಲೆ ಪರಿಣಾಮ ಬೀರುತ್ತವೆ. ನಮ್ಮ ದೇಹದಲ್ಲಿ ಮೆದುಳು ಅತ್ಯಂತ ಮಹತ್ವದ್ದು ಮತ್ತು ಸೂಕ್ಷ್ಮವಾದದ್ದು. ಇದರ ರಕ್ಷಣೆಯನ್ನು ನಮ್ಮ ಕೂದಲು ಮಾಡುತ್ತದೆ. ಹಾಗಾಗಿ ಈ ಮೂರು ದಿನ ಮೆದುಳಿನ ರಕ್ಷಣೆಗಾಗಿ ಕೂದಲು ಕತ್ತರಿಸಬಾರದು.
ಶಾಸ್ತ್ರದ ಪ್ರಕಾರ ಮಂಗಳವಾರ ಕೂದಲು ಕತ್ತರಿಸಿದರೆ ನಮ್ಮ ಆಯಸ್ಸು 8 ತಿಂಗಳು ಕಡಿಮೆಯಾಗುತ್ತದೆ. ಗುರುವಾರವನ್ನು ಲಕ್ಷ್ಮಿ ದೇವಿಯ ದಿನವೆಂದು ನಂಬಲಾಗುತ್ತದೆ. ಅಂದು ಕೂದಲು ಕತ್ತರಿಸಿದರೆ ಮನೆಯಲ್ಲಿರುವ ಐಶ್ವರ್ಯ ಕಡಿಮೆಯಾಗುತ್ತದೆ ಎಂದು ನಂಬಲಾಗಿದೆ. ಶನಿವಾರ ಕತ್ತರಿಸಿದರೆ 7 ತಿಂಗಳ ಆಯಸ್ಸು ಕಡಿಮೆಯಾಗುತ್ತದೆಯಂತೆ.
ಜ್ಯೋತಿಷ್ಯದ ಪ್ರಕಾರ ಮಂಗಳವಾರ ಮಂಗಳ ಗ್ರಹದ ದಿನವಂತೆ. ಅಂದು ರಕ್ತದಲ್ಲಿ ಮಂಗಳ ನೆಲೆಸಿ, ಕೂದಲಿನ ಉತ್ಪತ್ತಿಗೆ ಸಹಕಾರಿಯಾಗುತ್ತಾನಂತೆ. ಹಾಗೆಯೇ ಶನಿವಾರದಂದು ಶನಿ ಗ್ರಹದ ದಿನವಾಗಿದ್ದು, ಶನಿ ಗ್ರಹ ಚರ್ಮಕ್ಕೆ ಸಂಬಂಧಿಸಿದೆ. ಮಂಗಳವಾರ ಅಥವಾ ಶನಿವಾರ ಕೂದಲು ಕತ್ತರಿಸಿದರೆ ಮಂಗಳ ಅಥವಾ ಶನಿ ಗ್ರಹದಿಂದಾಗುವ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತೆ. ಹಾಗಾಗಿ ಈ ಮೂರು ದಿನ ಕೂದಲು ಕತ್ತರಿಸದಂತೆ ಸಲಹೆ ನೀಡಲಾಗುತ್ತದೆ.