ಕರ್ನಾಟಕ

ಭಾರತದ ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್

Pinterest LinkedIn Tumblr

Brest-Cance-r-In-Indiaಬೆಂಗಳೂರು, ಜೂ.26 – ಭಾರತದಲ್ಲಿ, ಅದರಲ್ಲಿಯೂ ನಗರ ಪ್ರದೇಶಗಳಲ್ಲಿ ಸ್ತನ ಕ್ಯಾನ್ಸರ್‌ನ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರಲ್ಲಿ ಪ್ರಸ್ತುತ ಇದು ಅತ್ಯಂತ ಸಾಮಾನ್ಯ ಸ್ವರೂಪದ ಕ್ಯಾನ್ಸರ್ ಆಗಿದೆ. ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಈ ಖಾಯಿಲೆ ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಉಂಟಾಗುತ್ತಿದ್ದು,

ಹೆಚ್ಚು ಗಂಭೀರವಾಗಿದೆ. ಇದೇ ರೀತಿ, ಈ ಸಮಸ್ಯೆಯನ್ನು ನಮ್ಮ ದೇಶದಲ್ಲಿ ಬಹಳ ನಿಧಾನವಾಗಿ ಪತ್ತೆ ಹಚ್ಚಲಾಗುತ್ತದೆ ಮತ್ತು ಈ ಪ್ರಕಾರ ಬದುಕುಳಿಯುವ ಪ್ರಮಾಣ ಕಡಿಮೆಯಾಗುತ್ತಿದೆ. ಕ್ರಮಬದ್ಧವಾಗಿ ತಪಾಸಣೆ ಹೊಂದುವುದು ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸುವಲ್ಲಿ ಸಹಾಯವಾಗುತ್ತದೆ ಮತ್ತು ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗುತ್ತದೆ.  ತಪಾಸಣೆಯಲ್ಲಿ ಹಲವು ವಿಧಾನಗಳಿವೆ ಉದಾಹರಣೆಗೆ; ಮಹಿಳೆಯರು ತಾವಾಗಿಯೇ  ಕ್ರಮಬದ್ಧವಾಗಿ ತಮ್ಮ ಸ್ತನಗಳ ಸ್ವಯಂ-ತಪಾಸಣೆ ಮಾಡಿಕೊಳ್ಳಬಹುದು, 40 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಅಲ್ಟ್ರಾಸೌಂಡ್ ಹಾಗೂ 40 ವರ್ಷಗಳಿಗಿಂತ ಹೆಚ್ಚಿನ ವಯೋಮಾನದ ಮಹಿಳೆಯರಿಗೆ ಮ್ಯಾಮ್ಮೊಗ್ರಫಿಯನ್ನು ಶಿಫಾರಸ್ಸು ಮಾಡಿದೆ. nಆರೋಗ್ಯಪೂರ್ಣ ಪಥ್ಯ, ತೂಕ ಕಡಿಮೆಗೊಳಿಸುವುದು, ಸ್ತನ್ಯಪಾನದಂತಹ ಅಭ್ಯಾಸಗಳು ಸ್ತನ ಕ್ಯಾನ್ಸರನ್ನು ತಡೆಗಟ್ಟುತ್ತದೆ ಅಥವಾ ವಿಳಂಬವಾಗಿಸುತ್ತದೆ. ಆದರೆ, ಇಲ್ಲಿ ವಂಶವಾಹಿ ಅಂಶಗಳು ಬಲಿಷ್ಠ ಪಾತ್ರ ನಿರ್ವಹಿಸುತ್ತದೆ.

ಗರ್ಭಕಂಠದ ಕ್ಯಾನ್ಸರ್:

ಗರ್ಭಕಂಠದ ಕ್ಯಾನ್ಸರ್  ಎಂದರೆ ಮಹಿಳೆಯ ಗರ್ಭಕಂಠ ಎಂದು ಕರೆಯುವ ಗರ್ಭಾಶಯದ ಭಾಗ. ಧೂಮಪಾನ, ಬಹು ಲೈಂಗಿಕ ಪಾಲುದಾರರಿಂದಾಗಿ ತಗಲುವ ಹ್ಯೂಮನ್ ಪ್ಯಾಪಿಲ್ಲೊಮ ವೈರಸ್ ಎಂಬ ವೈರಸ್‌ನಿಂದಾಗಿ ಈ ಗರ್ಭಕಂಠದ ಕ್ಯಾನ್ಸರ್ ಉಂಟಾಗುತ್ತದೆ.   ಸರಿಯಾದ ವಯಸ್ಸಿನಲ್ಲಿ ನೀಡಿದರೆ, ಈ ರೀತಿಯ ಗರ್ಭಕಂಠದ ಕ್ಯಾನ್ಸರ್‌ನ ಬಹು ಪ್ರಕರಣಗಳನ್ನು, ಹೆಚ್‌ಪಿವಿ ಲಸಿಕೆಯಿಂದ ತಡೆಗಟ್ಟಬಹುದು. ಬಹುಪಾಲು ಹೆಚ್‌ಪಿವಿ ಸೋಂಕುಗಳು ಕೆಲವು ವಾರಗಳಲ್ಲಿಯೇ ಕಡಿಮೆಯಾಗುತ್ತದೆ. ಆದರೆ, ಕೆಲವೊಮ್ಮೆ ಸೋಂಕು ಮುಂದುವರೆಯುತ್ತದೆ ಅಥವಾ ಮರುಕಳಿಸುವ ಸೋಂಕು, ಕ್ಯಾನ್ಸರ್ ಬದಲಾವಣೆಗಳನ್ನುಂಟು ಮಾಡುತ್ತದೆ. ಸೋಂಕು ಕ್ಯಾನ್ಸರ್‌ಗೆ ಬದಲಾಗಲು ಹಲವು ದಶಕಗಳೇ ಬೇಕಾಗುತ್ತದೆ. ಹೆಚ್‌ಪಿವಿ, ಪ್ಯಾಪ್ ಟೆಸ್ಟ್, ಕೊಲ್ಪೊಸ್ಕೊಪಿಯಂತಹ ತಪಾಸಣಾ ವಿಧಾನಗಳ ಮೂಲಕ ಇಂತಹ ಬದಲಾವಣೆಗಳನ್ನು ಪತ್ತೆ ಹಚ್ಚಬಹುದು. ಹೆಚ್ಚಿನ ಮಾಹಿತಿಗಾಗಿ ಡಾ . ಪಾಯಲ್ ಕೇಶ್ವರ್‌ಪು, ಎಸ್.ಆರ್ ಇಂಜಿನಿಯರಿಂಗ್ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಅವರನ್ನು ಸಂಪರ್ಕಿಸಬಹುದು.

Write A Comment