ರಾಷ್ಟ್ರೀಯ

ಸಾಲದ ಹಣ ನೀಡದಿದ್ದಕ್ಕೆ ಯುವಕನ ಶಿಶ್ನಕ್ಕೆ ಕತ್ತರಿ ಹಾಕಿದ ಮಂಗಳ ಮುಖಿಯರು !

Pinterest LinkedIn Tumblr

8301xve52xj19xjlpcq7aoqhಮಂಗಳಮುಖಿಯರೆಂದರೆ ಅದೃಷ್ಟದ ಸಂಕೇತ ಎನ್ನುತ್ತಾರೆ. ಆದರೆ ಇದೇ ಮಂಗಳ ಮುಖಿಯರು ಯುವಕನೊಬ್ಬನ ಶಿಶ್ನಕ್ಕೆ ಕತ್ತರಿ ಹಾಕಿದ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಭೋಜ್ ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು  ಮನೋಜ್ ಎಂಬ  ಈತ ಮುಂಗಳಮುಖಿಯರ ತಂಡದ ಜೊತೆ ಡ್ರಮ್ಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಗುರುವಾರ ಗುಂಪಿನಲ್ಲಿದ್ದ ಮುಂಗಳಮುಖಿ ಬಂದು ಒತ್ತಡ ಶಮನಗೊಳಿಸುವ ಔಷಧದ ಜೊತೆ ಮಾದಕ ವಸ್ತು ಸೇರಿಸಿಕೊಟ್ಟು, ಸಾಲದ ಹಣ ತೀರಿಸುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಪ್ರಜ್ಞೆ ತಪ್ಪಿ ಬಿದ್ದ ಮನೋಜ್ ನ ಶಿಶ್ನ ಕತ್ತರಿಸಿ ನಿವಾರಿ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆ ಬದಿ ಆತನನ್ನು ಎಸೆದು ಹೋಗಿದ್ದರು.

ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಯುವಕ ರಸ್ತೆ ಬದಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮೀರತ್ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಮಂಗಳಮುಖಿಯರ ಮೇಲೆ ಪ್ರಕರಣ ದಾಖಲಾಗಿದ್ದು ಮೂವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment