ಮನೋರಂಜನೆ

ಮಾಜಿ ಗೆಳತಿ ಕರೀನಾಗೆ ವಿವಾಹ ಆಮಂತ್ರಣ ನೀಡಿದ ಶಾಹೀದ್..

Pinterest LinkedIn Tumblr

905shahidkareena-story_647_062415120838ಜುಲೈ 8 ರಂದು ಹೆಹಲಿ ಮೂಲದ ಮೀರಾ ಜೊತೆ ವಿವಾಹ ಬಂಧನಕ್ಕೊಳಗಾಗುತ್ತಿರುವ ಬಾಲಿವುಡ್ ನಟ ಶಾಹೀದ್ ಕಪೂರ್ ತಮ್ಮ ವಿವಾಹದ ಮೊದಲ ಆಮಂತ್ರಣ ಪತ್ರಿಕೆಯನ್ನು ತಮ್ಮ ಮಾಜಿ ಗೆಳತಿ ಕರೀನಾ ಕಪೂರ್ ಮತ್ತಾಕೆಯ ಪತಿ ಸೈಫ್ ಆಲಿಖಾನ್ ಅವರಿಗೆ ನೀಡಿದ್ದಾರೆನ್ನಲಾಗಿದೆ.

ರಾಜಧಾನಿ ನವದೆಹಲಿಯಲ್ಲಿ ಶಾಹೀದ್ ಕಪೂರ್ ಅವರ ವಿವಾಹಕ್ಕೆ ಅದ್ದೂರಿ ಸಿದ್ದತೆಗಳು ನಡೆಯುತ್ತಿದ್ದು, ಜುಲೈ 6 ರಿಂದಲೇ ವಿವಾಹ ಸಂಬಂಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ತಮ್ಮ ಸ್ನೇಹಿತರು ಹಾಗೂ ಬಾಲಿವುಡ್ ತಾರೆಯರಿಗೆ ಆಹ್ವಾನ ನೀಡಲು ಶಾಹೀದ್ ಈಗಿನಿಂದಲೇ ಆರಂಭಿಸಿದ್ದಾರೆನ್ನಲಾಗಿದ್ದು, ಮೊದಲ ಆಮಂತ್ರಣ ಪತ್ರಿಕೆಯನ್ನು ಮಾಜಿ ಗೆಳತಿಗೆ ನೀಡುವ ಮೂಲಕವೇ ಈ ಕಾರ್ಯಕ್ಕೆ ಮುಂದಾಗಿದ್ದಾರೆನ್ನಲಾಗಿದೆ.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ, ತನ್ನ ವಿವಾಹದ ಕುರಿತು ಶಾಹೀದ್ ತನ್ನೊಂದಿಗೆ ಮಾತನಾಡಿದ್ದು, ಆಹ್ವಾನ ನೀಡಿದರೆ ತಾನು ಖಂಡಿತ ತೆರಳುವುದಾಗಿ ಕರೀನಾ ಕಪೂರ್ ತಿಳಿಸಿದ್ದರು. ಅದರಂತೆ ಈಗ ಶಾಹೀದ್, ಕರೀನಾ ಮತ್ತಾಕೆಯ ಪತಿಗೆ ಆಹ್ವಾನ ನೀಡಿದ್ದು, ದಂಪತಿಗಳು ವಿವಾಹಕ್ಕೆ ತೆರಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ವಿವಾಹದ ಬಳಿಕ ಬಾಲಿವುಡ್ ಗಣ್ಯರಿಗಾಗಿ ಶಾಹೀದ್ ಕಪೂರ್ ದಂಪತಿಗಳು ಜುಲೈ 12 ರಂದು ಮುಂಬೈನ ಪಂಚತಾರಾ ಹೋಟೆಲಿನಲ್ಲಿ ಭರ್ಜರಿ ಪಾರ್ಟಿ ಏರ್ಪಡಿಸಿದ್ದಾರೆಂದು ಹೇಳಲಾಗಿದ್ದು, ಬಹುಶಃ ಕರೀನಾ ಈ ಪಾರ್ಟಿಯಲ್ಲಿ ಕಾಣಿಸಿಕೊಳ್ಳಬಹುದೆಂಬ ಮಾತುಗಳು ಕೇಳಿ ಬರುತ್ತಿದೆ.

Write A Comment