ಚೀನಾದ ರಸ್ತೆಗಳಲ್ಲಿ ಓಡಾಡುತ್ತಿದ್ದ ಮಂದಿ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಏಕೆ ಅಂತೀರಾ ..? ಇಲ್ಲಿನ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಬೃಹತ್ ಸ್ಕ್ರೀನ್ ಒಂದರಲ್ಲಿ ಸುಮಾರು 10 ನಿಮಿಷಗಳ ಕಾಲ ನೀಲಿ ಚಿತ್ರ ಪ್ರಸಾರವಾದ ಘಟನೆ ನಡೆದಿದ್ದು ಅಲ್ಲಿದ್ದವರಿಗೆ ಇರಿಸುಮುರಿಸಾದ ಘಟನೆ ನಡೆದಿದೆ.
ಹೌದು. ಇಲ್ಲಿನ ರಸ್ತೆ ಸಮೀಪದಲ್ಲಿ ಹಾಕಲಾಗಿದ್ದ ಬೃಹತ್ ಸ್ಕ್ರೀನ್ ನಲ್ಲಿ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರದ ದೃಶ್ಯ ಪ್ರಸಾರವಾಗಲು ಪ್ರಾರಂಭಿಸಿದ್ದು ಇದನ್ನು ನೋಡಿದ ಚೀನಾದ ಮುಡಾನ್ ಜಿಯಾಂಗ್ ನಿವಾಸಿಗಳು ಕಂಗಾಲಾದರು. ಸುಮಾರು 10 ನಿಮಿಷ ಈ ನೀಲಿ ಚಿತ್ರ ಪ್ರದರ್ಶನವಾಗಿದ್ದು ವಿಷಯ ತಿಳಿದು ಪೊಲೀಸರು ಕೇಬಲ್ ಸಂಪರ್ಕ ತೆಗೆದುಹಾಕಿದರು ಎನ್ನಲಾಗಿದೆ.
ಸಾರ್ವಜನಿಕವಾಗಿ ಬಿತ್ತರಗೊಂಡ ಈ ನೀಲಿ ಚಿತ್ರವನ್ನು ಯುವಕರು, ಮಕ್ಕಳು ಸೇರಿದಂತೆ ಎಲ್ಲರೂ ವೀಕ್ಷಿಸಿದ್ದು ಕೆಲವರು ಸ್ಮಾರ್ಟ್ ಫೋನ್ ಗಳಲ್ಲಿ ರೆಕಾರ್ಡ್ ಮಾಡಿಕೊಂಡು, ಹಲವರು ಸಾಮಾಜಿಕ ಜಾಲತಾಣ ವಿ ಚಾಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಸಾರ್ವಜನಿಕ ಜಾಹೀರಾತು ಕಂಪನಿಯ ಆಪರೇಟರ್ ಒಬ್ಬ ತನ್ನ ವರ್ಕ್ ಸ್ಟೇಶನ್ ನಲ್ಲಿ ಈತ ನೀಲಿ ಚಿತ್ರ ವೀಕ್ಷಿಸುತ್ತಿದ್ದನಂತೆ, ಆದರೆ ಔಟ್ ಪುಟ್ ಕೇಬಲ್ ಅನ್ನು ತೆಗೆಯಲು ಮರೆತಿದ್ದರಿಂದ, ಈತ ನೋಡುತ್ತಿದ್ದ ನೀಲಿ ಚಿತ್ರ ಸಾರ್ವಜನಿಕವಾಗಿಯೂ ಪ್ರಸಾರವಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.
ವಿಶೇಷವೆಂದರೆ ಇತ್ತೀಚೆಗಷ್ಟೇ ಕೇರಳದ ಬಸ್ ಸ್ಟ್ಯಾಂಡ್ ವೊಂದರಲ್ಲಿ ದಿಢೀರನೆ ನೀಲಿ ಚಿತ್ರ ಪ್ರಸಾರವಾಗಿ ಪ್ರಯಾಣಿಕರು ಕಂಗಾಲಾಗಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.