ಟುನೇಶಿಯಾ: ಐಸಿಎಸ್ ಉಗ್ರರು ಟ್ಯುನೇಶಿಯಾದ ಪ್ರಖ್ಯಾತ ರಿಸಾರ್ಟ್ ಸೌಸೆ ಮೇಲೆ ದಾಳಿ ಮಾಡಿ 19 ಜನರನ್ನು ಕೊಂದು ಹಾಕಿದ ಹೇಯ ಘಟನೆ ವರದಿಯಾಗಿದೆ ಎಂದು ಅಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇಂಪಿರಿಯಲ್ ಮರಹ್ಬಾ ಹೋಟೆಲ್ಗೆ ನುಗ್ಗಿದ ಸಶಸ್ತ್ರಧಾರಿಗಳು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐಸಿಎಸ್ ಉಗ್ರರ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರನನ್ನು ಗುಂಡಿಟ್ಟು ಕೊಂದಿದ್ದಾರೆ.
ಸೌಸೆ ರಿಸಾರ್ಟ್ ಟುನೇಶಿಯಾ ಖ್ಯಾತ ಪ್ರವಾಸಿ ತಾಣ. ಹಲವು ಬೀಚ್ಗಳು ಅತ್ಯುತ್ತಮ ಹೋಟೆಲ್ಗಳಿರುವುದರಿಂದ ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ.
ಟುನೇಶಿಯಾದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಐಸಿಎಸ್ ಉಗ್ರರು ಬಾರ್ಡೊ ಮ್ಯೂಸಿಯಂ ಮೇಲೆ ದಾಳಿ ಮಾಡಿ ವಿದೇಶಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಇದೀಗ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.