ಕನ್ನಡ ವಾರ್ತೆಗಳು

ವಿಕಾಸ್‌ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಾದಕ ಮುಕ್ತ ದಿನಾಚರಣೆ’

Pinterest LinkedIn Tumblr

Vikas_Anty_DrugDay_1

ಮಂಗಳೂರು : ‘ಇವತ್ತುದೇಶದಲ್ಲಿ ಮೂವತ್ತನಾಲ್ಕು ಲಕ್ಷಜನ ಮಾದಕ ವ್ಯಸನಕ್ಕೆತುತ್ತಾಗಿದ್ದಾರೆ.ಸುಮಾರು 15 ರಿಂದ 30 ವರ್ಷದ ವಯಸ್ಸಿನವರಲ್ಲಿ ಇಂತಹದುರ್ವ್ಯಸನಹೆಚ್ಚು ಕಂಡು ಬರುತ್ತಿದೆ. ಹೆತ್ತವರು ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಸೂಕ್ತ ಗಮನವನ್ನು ಹರಿಸುತ್ತಿರಬೇಕು, ತಮ್ಮ ಬಿಡುವಿನ ಸಮಯವನ್ನು ಹೆಚ್ಚು ಮಕ್ಕಳೊಂದಿಗೆ ಕಳೆಯಬೇಕು. ಪೊಲೀಸ್ ಇಲಾಖೆ ಯಾವಾಗಲೂ ಸಮಾಜದರಕ್ಷಣೆಗೆ ಬದ್ಧವಾಗಿರುತ್ತದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ.ಶರಣಪ್ಪ‌ಎಸ್.ಡಿ ಹೇಳಿದರು.

ಅವರು ನಗರದ ವಿಕಾಸ್ ಪದವಿ ಪೂರ್ವಕಾಲೇಜಿನಲ್ಲಿ ನಡೆದ‌ ಅಂತರಾಷ್ಟ್ರೀಯ ಮಾದಕ ಮುಕ್ತ ದಿನದ‌ ಆಚರಣೆಯಲ್ಲಿ ಮುಖ್ಯ‌ಅತಿಥಿಯಾಗಿ ಆಗಮಿಸಿದ್ದರು.ಈ ಕಾರ್ಯಕ್ರಮ ಪೋಲೀಸ್‌ಇಲಾಖೆಯ ಸಹಯೋಗದೊಂದಿಗೆ‌ ಆಯೋಜನೆಗೊಂಡಿತ್ತು.

Vikas_Anty_DrugDay_4 Vikas_Anty_DrugDay_3 Vikas_Anty_DrugDay_2

ನಗರದ 24 ಶಾಲೆಯ 174 ವಿದ್ಯಾರ್ಥಿಗಳು ಕಾಲೇಜು ಆಯೋಜಿಸಿದ್ದ ತೇಪೆಚಿತ್ರ(ಕೊಲಾಜ್ ಮೇಕಿಂಗ್) ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನವನ್ನು (ಹತ್ತು ಸಾವಿರರೂಪಾಯಿ ನಗದು ಮತ್ತು ಫಲಕದೊಂದಿಗೆ) ಸೈಂಟ್ ಅಲೋಶಿಯಸ್ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಸ್ವಾತಿ ಶಣೈ, ದಿವ್ಯ ಫರ್ಟಾಡೊ‌ಈರ್ವರತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು (ರೂಪಾಯಿ‌ಐದು ಸಾವಿರ ಮತ್ತು ಫಲಕದೊಂದಿಗೆ)ಡೆಲ್ಲಿ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಅಂಕಿತಾ.ಪಿ , ಮನಸ್ವಿನಿ ಈರ್ವರ ತಂಡ ಪಡೆದುಕೊಂಡಿತು. ತೃತೀಯ ಬಹುಮಾನವನ್ನು(ರೂಪಾಯಿ ಮೂರು ಸಾವಿರ ಮತ್ತು ಫಲಕದೊಂದಿಗೆ )ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಾದ ಅನುಷಾ ವೈ.ಜಿ, ಜಾನ್ವಿ ಪುರೋಹಿತ್‌ಈರ್ವರತಂಡ ಪಡೆದುಕೊಂಡಿತು.

ಬಹುಮಾನವನ್ನುಕಾಲೇಜಿನ ಪ್ರಾಂಶುಪಾಲರಾದಡಾ.ಕೆ.ರಾಜೇಂದ್ರ ವಿಜೇತ ತಂಡಗಳಿಗೆ ವಿವರಿಸಿದರು.ಇದೇ ಸಂದರ್ಭದಲ್ಲಿಪೋಷಕರಿಗಾಗಿ ಏರ್ಪಡಿಸಿದ್ದ ‘ಹದಿಹರೆಯದ ಮಕ್ಕಳಿಗೆ ಉತ್ತಮ ಪೋಷಣಾಕೌಶಲ್ಯ’ ಎಂಬ ವಿಚಾರದ ಬಗ್ಗೆ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ.ನವೀನ್‌ಎಸ್.ಎಕಾರ್ಯಾಗಾರವನ್ನು ನಡೆಸಿಕೊಟ್ಟರು.

Write A Comment