ಮಂಗಳೂರು, ಜೂ.29: ಪ್ರಸಕ್ತ ಮಳೆಗಾಲದಲ್ಲಿ ದ.ಕ. ಜಿಲ್ಲೆಯಲ್ಲಿ ಎದುರಾಗಬಹುದಾದ ಪ್ರಕೃತಿ ವಿಕೋಪವನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಲು ಜಿಲ್ಲಾಡಳಿತ ಸಂಪೂರ್ಣ ಸನ್ನದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದರು. ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ನಡೆದ ಜಿಲ್ಲೆಯ ಪ್ರಸಕ್ತ ಮುಂಗಾರು ಮಳೆಯ ಸ್ಥಿತಿಗತಿ ಮತ್ತು ವಿಪತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪದಿಂದ ಪ್ರಾಣಹಾನಿ ಅಥವಾ ಮನೆಗಳಿಗೆ ಹಾನಿ ಉಂಟಾದ ಸಂದರ್ಭ 24 ಗಂಟೆಗಳೊಳಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಜರಗಿಸಬೇಕು. ಹಾನಿ ಸಂಭವಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಪರಿಹಾರ ನೀಡಬೇಕು. ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆ ಯನ್ನು ವಿಳಂಬಿಸಬಾರದು ಎಂದು ಸಚಿವ ರೈ ಅಧಿಕಾರಿಗಳಿಗೆ ಆದೇಶಿಸಿದರು.ಜಿಲ್ಲೆಯಲ್ಲಿ ಮಳೆಗಾಲದ ವಿಶೇಷ ಕಾರ್ಯಕ್ಕಾಗಿ 75 ಮಂದಿಯ ಹೋಮ್ ಗಾರ್ಡ್ಸ್ ತಂಡ ಮತ್ತು ಮುಳುಗು ತಂಡ ಸಿದ್ಧವಾಗಿದೆ ಎಂದು ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರು ಸಭೆಗೆ ಮಾಹಿತಿ ನೀಡಿದರು.
ಶಿರಾಡಿ ಘಾಟಿ ರಸ್ತೆಯ ಕಾಂಕ್ರಿಟ್ ಕಾಮಗಾರಿ ಮೊದಲ ಹಂತದಲ್ಲಿ 1.5 ಕಿ.ಮೀ. ಬಾಕಿಯಿದ್ದು, ಕಾಮಗಾರಿ ಆಗಸ್ಟ್‌ನೊಳಗೆ ಮುಗಿಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.ಶಿರಾಡಿ ಘಾಟಿ ರಸ್ತೆಗೆ ಪರ್ಯಾಯವಾಗಿ ಚಾರ್ಮಾಡಿ ರಸ್ತೆಯಲ್ಲಿ ಸೌಲಭ್ಯ ಕಲ್ಪಿಸಲು ಸೂಚಿ ಸಿದ್ದರೂ ಹೆದ್ದಾರಿ ಅಧಿಕಾರಿಗಳು ಇದಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗುತ್ತ್ತಿದೆ ಎಂದು ಸಚಿವ ರೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಈ ಸಂದರ್ಭ ಮಾತನಾಡಿದ ಎಸ್ಪಿ ಡಾ.ಎಸ್. ಡಿ.ಶರಣಪ್ಪ, ಪೊಲೀಸ್ ಇಲಾಖೆಯು ಸೂಕ್ತ ಸಲಹೆ ಸೂಚನೆ ನೀಡಿದರೂ ಹೆದ್ದಾರಿ ಅಧಿಕಾರಿ ಗಳು ಅದಕ್ಕೆ ಮಾನ್ಯತೆ ನೀಡುತ್ತಿಲ್ಲ. ಘನ ವಾಹನ ಗಳ ಸಂಚಾರಕ್ಕೆ ನಿಷೇಧ ವಿಧಿಸಿದ್ದರೂ ಟ್ರಾಫಿಕ್ ಜಾಮ್ ಸಮಸ್ಯೆ ಮುಂದುವರಿದಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದರು.
ಮಂಗಳೂರು ತಾಲೂಕಿನ 83 ಅಪಾಯಕಾರಿ :
ಕೋರೆಗಳ ಪೈಕಿ 29 ಮುಚ್ಚಲಾಗಿದೆ. ಮುಲ್ಕಿಯಲ್ಲಿ 38ರ ಪೈಕಿ 18 ಕೋರೆಗಳನ್ನು ಮುಚ್ಚಲಾಗಿದೆ. ಇನ್ನು ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ 123ರ ಪೈಕಿ 38 ಮುಚ್ಚಲಾಗಿದೆ. ಬೆಳ್ತಂಗಡಿಯಲ್ಲಿ 72ರ ಪೈಕಿ ಕೆಲವು ಕೋರೆಗಳನ್ನು ಮುಚ್ಚಲಾಗಿದ್ದು, ಉಳಿದವುಗಳಿಗೆ ಆವರಣ ಗೋಡೆ ಕಟ್ಟಲಾಗಿದೆ. ಪುತ್ತೂರಿನಲ್ಲಿ 106ರ ಪೈಕಿ 52 ಕೋರೆಗಳನ್ನು ಮುಚ್ಚಲಾಗಿದ್ದರೆ, ಕಡಬದಲ್ಲಿ 19ರ ಪೈಕಿ 9 ಹಾಗೂ ಸುಳ್ಯದಲ್ಲಿ 49 ಕೋರೆಗಳ ಪೈಕಿ 21ನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಧಿಕಾರಿ, ಮಳೆಗಾಲದಲ್ಲಿ ಕಲ್ಲಿನ ಕೋರೆಗಳಲ್ಲಿ ನೀರು ತುಂಬಿ ಅವಘಡಗಳು ಸಂಭವಿಸುವುದು ಸಾಮಾನ್ಯ. ಹಾಗಾಗಿ ಸರಕಾರಿ ಕೋರೆಗಳನ್ನು ಮು ಚ್ಚುವ ಅಥವಾ ತಡೆಬೇಲಿ ಹಾಕುವ ಕೆಲಸ ತಕ್ಷಣ ಆಗಬೇಕು. ಖಾಸಗಿಯವರು ಅಂತಹ ಕೋರೆ ಗಳನ್ನು ಮುಚ್ಚುವ ಅಥವಾ ಅದರ ಸುತ್ತ ಬೇಲಿ ಹಾಕುವ ಕೆಲಸ ಕೂಡಲೇ ಮಾಡ ಬೇಕು. ಇಲ್ಲದಿ ದ್ದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಮಳೆಗಾಲದಲ್ಲಿ ಎದುರಾಗುವ ಇಂತಹ ರೋಗಗಳ ನಿಯಂತ್ರಣಕ್ಕೆ ವಿಶೇಷ ಅಭಿಯಾನ ಕೈಗೊಳ್ಳಬೇಕು. ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಣಾಧಿಕಾರಿಗಳು ಆರೋಗ್ಯ ಇಲಾಖೆ ಜತೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಸಚಿವ ರೈ ಸೂಚಿಸಿದರು. *ಜಿಲ್ಲೆಯಲ್ಲಿ ಸಾಮಾನ್ಯವಾಗಿ ಜನವರಿ ಯಿಂದ ಜೂನ್‌ವರೆಗೆ ಸರಾಸರಿ 1,176.2 ಮಿ.ಮೀ. ಮಳೆ ಬೀಳಬೇಕಾಗಿದ್ದು, ಇದುವರೆಗೆ 931.4 ಮಿ.ಮೀ. ಮಾತ್ರ ಮಳೆ ಸುರಿದಿದ್ದು, ಶೇ.79ರಷ್ಟು ಮಾತ್ರ ಮಳೆಯಾಗಿದೆ. ಜೂನ್‌ನಲ್ಲೇ ಸುಮಾರು ಶೇ.33ರಷ್ಟು ಮಳೆ ಪ್ರಮಾಣ ಇಳಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರಕೃತಿ ವಿಕೋಪಕ್ಕೆ ಒಟ್ಟು 7 ಬಲಿ:
ಪ್ರಸಕ್ತ ವರ್ಷ ಪ್ರಕೃತಿ ವಿಕೋಪದಿಂದ ಬಂಟ್ವಾಳದಲ್ಲಿ ಮೂವರು, ಪುತ್ತೂರು ಮತ್ತು ಬೆಳ್ತಂಗಡಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಅವರ ಕುಟುಂಬಕ್ಕೆ 17.50 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಕಡಬದ 4 ಪ್ರಕರಣಗಳಲ್ಲಿ 1.40 ಎಕರೆ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 31 ಮನೆಗಳಿಗೆ ತೀವ್ರ ಹಾನಿಯಾಗಿದ್ದು, 6 ಲಕ್ಷ ರೂ. ಪರಿಹಾರ ಮತ್ತು ಭಾಗಶಃ ಹಾನಿ ಗೀಡಾದ 469 ಮನೆಗಳಿಗೆ 20.32 ಲಕ್ಷ ರೂ. ಪರಿಹಾರ ಒದಗಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಡೆಂಗ್‌ನಿಂದ ಅಧಿಕೃತವಾಗಿ ಮೂವರು ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಯಂತೆ ಇನ್ನೂ ಇಬ್ಬರು ಡೆಂಗ್‌ಗೆ ಬಲಿಯಾಗಿದ್ದು, ಇದರ ಖಚಿತತೆ ಮತ್ತು ಅಂತಿಮ ಪರೀಕ್ಷಾ ವರದಿ ಬರಬೇಕಾಗಿದೆ. ಅದಲ್ಲದೆ ಜಿಲ್ಲೆಯಲ್ಲಿ 241 ಮಂದಿಗೆ ಡೆಂಗ್ ಹಾಗೂ 1,247 ಮಂದಿಗೆ ಮಲೇರಿಯಾ ರೋಗ ತಗಲಿದೆ. ಸಾಂಕ್ರಾಮಿಕ ರೋಗಗಳ ಹಾವಳಿ ತಡೆಗೆ ಫಾಗಿಂಗ್ ಸಹಿತ ಹಲವು ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ರಾಮಕೃಷ್ಣ ರಾವ್ ಹೇಳಿದರು.